#RememberingSPB – ಒಂದೇ ಹಾಡಿನಿಂದ ಬಹುಬೇಡಿಕೆಯ ಗಾಯಕನಾದ ಎಸ್‌ಪಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎಲ್ಲ ಗಾಯಕರನ್ನು ಅವಕಾಶಗಳು ಹುಡುಕಿಕೊಂಡು ಬರುವುದಿಲ್ಲ, ಆದರೆ ನಾವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು. ಆದರೆ ಎಸ್‌ಪಿಬಿ ಅವರ ವಿಷಯದಲ್ಲಿ ಹೀಗಾಗಲಿಲ್ಲ. ಅವಕಾಶವೇ ಅವರನ್ನು ಅರಸಿ ಬಂತು.
ಆ ಸಮಯದಲ್ಲಿ ಹೆಚ್ಚು ಮಿಂಚುತ್ತಿದ್ದವರು ಪಿ.ಬಿ.ಶ್ರೀನಿವಾಸ್ ಹಾಗೂ ಟಿ.ಎಂ ಸೌಂದರರಾಜನ್. ಇವರುಗಳು ಹಾಡಿದ ಹಾಡುಗಳು ಸದಾ ಹಿಟ್ ಆಗುತ್ತಿದ್ದವು. ಇವರನ್ನು ಮೀರಿಸೋಕೆ ಸಾಧ್ಯವೇ ಇಲ್ಲವೇನೋ ಎನ್ನುವಂತಿತ್ತು ಹಾಡುಗಳು.
ಈ ಸಂದರ್ಭದಲ್ಲಿ ಎಂ.ಜಿ.ಆರ್ ಹಾಗೂ ಜಯಲಲಿತಾ ಅಭಿನಯದ ‘ಅದಿಮೈ ಪೆನ್’ ಚಿತ್ರದ ಆಯಿರಾಮ್ ನಿಲವೆ ವಾ’ ಹಾಡು ಎಸ್‌ಪಿಬಿ ಅವರ ಪಾಲಿಗೆ ಒಲಿದು ಬಂತು. ಈ ಆಫರ್ ತಂದಿದ್ದು ಬೇರಾರೂ ಅಲ್ಲ, ಸ್ವತಃ ಎಂ.ಜಿ.ಆರ್.
ವೈಯಕ್ತಿಕವಾಗಿ ಈ ಹಾಡಿಗೆ ಎಸ್‌ಪಿಬಿ ಧ್ವನಿಯೇ ಬೇಕು ಎಂದು ಕಾದು, ಹಾಡಿಸಿದ್ದರು. ಈ ಹಾಡು ಯಾವ ಮಟಿಗೆ ದೊಡ್ಡ ಹಿಟ್ ಆಯ್ತು ಎಂದರೆ ಪಿ.ಬಿ.ಶ್ರೀನಿವಾಸ್, ಟಿ.ಎಂ. ಸೌಂದರರಾಜನ್ ಅವರ ಹೆಸರುಗಳ ಸಾಲಿನಲ್ಲಿ ಎಸ್‌ಪಿಬಿ ಸೇರಿ ಹೋದರು. ಸೇರಿದ್ದಷ್ಟೇ ಅಲ್ಲ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಎಸ್‌ಪಿಬಿ ಎಲ್ಲರಿಗಿಂತ ಬಹುಬೇಡಿಕೆಯ ಗಾಯಕರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!