#RememberingSPB – ಎಸ್‌ಪಿಬಿ ಹೆಸರಲ್ಲಿ ಇಷ್ಟೆಲ್ಲಾ ದಾಖಲೆಗಳಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎಸ್‌ಪಿಬಿ ಅವರ ಹೆಸರಲ್ಲಿ ವಿಶೇಷ ದಾಖಲೆಯೊಂದಿದೆ. ಅದೇನು ಗೊತ್ತಾ? ಎಸ್‌ಪಿಬಿ ಅರು 12 ಗಂಟೆಯಲ್ಲಿ 21 ಹಾಡುಗಳನ್ನು ಹಾಡಿದ್ದಾರೆ.
ಹೌದು, ಈ ದಾಖಲೆ ಸೃಷ್ಟಿಯಾಗಿರುವುದು ಕನ್ನಡದಲ್ಲಿ. ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಮುದ್ರಿಸಿದ ದಾಖಲೆ ಇದಾಗಿದೆ.
ಕನ್ನಡ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರು ಸಂಯೋಜಿಸಿದ 21 ಹಾಡುಗಳನ್ನು 12 ಗಂಟೆಯಲ್ಲಿ ಎಸ್‌ಪಿ ಹಾಡಿ, ರೆಕಾರ್ಡಿಂಗ್ ಮುಗಿಸಿದ್ದರು. ಈ ಹಿಂದೆ ತಮಿಳಿನಲ್ಲಿ ಒಂದೇ ದಿನದಲ್ಲಿ 19 ಹಾಡುಗಳನ್ನು ಹಾಡಿದ್ದರು, ಹಾಗೂ ಹಿಂದಿಯಲ್ಲಿ 16 ಹಾಡುಗಳನ್ನು ಹಾಡಿದ್ದರು.

ತನ್ನ ಜೀವಮಾನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಿನ್ನಿಸ್ ದಾಖಲೆ ಎಸ್‌ಪಿಬಿ ಅವರ ಹೆಸರಿನಲ್ಲಿದೆ. 40 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಇವರು ಹಾಡಿದ್ದಾರೆ. ಅಂದರೆ ವರ್ಷಕ್ಕೆ ಸರಾಸರಿ 930, ದಿನಕ್ಕ 3 ಹಾಡು ಹಾಡಿದ್ದಾರೆ. ಈ ದಾಖಲೆಯನ್ನು ಈವರೆಗೂ ಯಾರೂ ಮುರಿದಿಲ್ಲ. ಇಷ್ಟು ಭಾಷೆಗಳಲ್ಲಿ ಇಷ್ಟು ಹಾಡಿರುವ ಗಾಯಕರಲ್ಲಿಯೂ ಇವರೇ ಮೊದಲು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!