ಈವರೆಗೆ ಕೇವಲ 2 ಕೋವಿಡ್‌ ಪ್ರಕರಣ ಹೊಂದಿದ್ದ ಈ ರಾಷ್ಟ್ರಗಳು ಈಗ ಸಂಪೂರ್ಣ ಲಾಕ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಸಿಡ್ನಿಯ ಪೆಸಿಫಿಕ್‌ ಸಮೀಪದ ಕಿರಿಬಾಟಿ ಮತ್ತು ಸಮೋವಾ ಎನ್ನುವ ಸಣ್ಣ ಸ್ವೀಪ ರಾಷ್ಟ್ರಗಳಲ್ಲಿ ಕೋವಿಡ್‌ ಪತ್ತೆಯಾದ ಎರಡು ವರ್ಷಗಳ ಬಳಿಕ ಈಗ ಲಾಕ್‌ ಡೌನ್‌ ಮಾಡಲಾಗಿದೆ.
2019ರಿಂದ ಈವರೆಗೆ ಕೇವಲ 2 ಕೊರೋನಾ ಕೇಸುಗಳ ಮೂಲಕ ಕೋವಿಡ್‌ ಗೆ ಸೆಡ್ಡು ಹೊಡೆದ ಈ ರಾಷ್ಟ್ರಗಳಲ್ಲಿ ಈಗ 15 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ.
ವಿಮಾನಯಾನದ ನಿರ್ಬಂಧ ತೆರವುಗೊಳಿಸಿದ ಬಳಿಕ ಸಂಚರಿಸಿದ ಮೊದಲ ವಿಮಾನದಿಂದ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಫಿಜಿಯಿಂದ ಕಿರಿಬಾಟಿಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಡೆಸಿತ್ತು. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಕೊರೋನಾ ಸೋಂಕು ತಗುಲಿದ್ದು, ಇವರನ್ನು ಕಿರಿಬಾಟಿಯ ಮನೆಯಲ್ಲಿಯೇ ಐಸೊಲೇಟ್‌ ಆಗಲು ಸೂಚಿಸಲಾಗಿದೆ.
ಇನ್ನು ಬ್ರಿಸ್ಬೇನ್‌ ನಿಂದ ಸಮೊವಾಕ್ಕೆ ಬಂದ ವಿಮಾನದ 15 ಪ್ರಯಾಣಿಕರಿಗೆ ಕೋವಿಡ್‌ ದೃಢಪಟ್ಟಿದೆ. ಹಾಗಾಗಿ ಈ ಎರಡೂ ರಾಷ್ಟ್ರಗಳಲ್ಲಿ ಈಗ ಲಾಕ್‌ ಡೌನ್‌ ಘೋಷಣೆ ಮಾಡಲಾಗಿದ್ದು, ಎಲ್ಲರೂ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಸಮೋವಾದ ಶೇ.62ರಷ್ಟು ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆ ಹಾಗೂ ಕಿರಿಬಾಟಿಯ ಶೇ.34ರಷ್ಟು ಮಂದಿ ಲಸಿಕೆಯ ಡಬಲ್‌ ಡೋಸ್‌ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!