ನಮೀಬಿಯಾ ಚೀತಾಗಳಿಗೆ ಮರುನಾಮಕರಣ: ಪ್ರಧಾನಿ ಮೋದಿ ಕರೆಗೆ ಸಿಕ್ಕಿತು ಅಭೂತಪೂರ್ವ ಬೆಂಬಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌ 

ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿರುವ ನಮೀಬಿಯಾ ಚಿರತೆಗಳಿಗೆ ಪ್ರಧಾನಿ ಮೋದಿ ಅವರು ಕರೆ ನೀಡಿದಂತೆ ಜನರು ವಿವಿಧ ಹೆಸರುಗಳನ್ನು ಸಲಹೆ ನೀಡಿದ್ದು, ಅದ್ರಂತೆ ಈಗ ಮರುನಾಮಕರಣ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಸೆಪ್ಟೆಂಬರ್ 25, 2022 ರಂದು ಪ್ರಧಾನಿ ಮೋದಿಯವರು ತಮ್ಮ ಮನ್ ಕೀ ಬಾತ್‌ನಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಮರುಪರಿಚಯಿಸಲಾದ ಚೀತಾಗಳ ಕುರಿತು ಸಲಹೆಗಳನ್ನು ನೀಡುವಂತೆ ನಾಗರಿಕರನ್ನು ಮನವಿ ಮಾಡಿದ್ದರು.

ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 31, 2022 ರವರೆಗೆ mygov.in ನಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಚೀತಾಗಳಿಗೆ ಹೊಸ ಹೆಸರುಗಳನ್ನು ಸೂಚಿಸುವ ಒಟ್ಟು 11,565 ನಮೂದುಗಳನ್ನು ಸ್ವೀಕರಿಸಲಾಗಿದೆ ಎಂದು ಗುರುವಾರ ಅಧಿಕೃತ ಹೇಳಿಕೆ ತಿಳಿಸಿದೆ.

ಆಶಾ (ಹೆಣ್ಣು) ಎಂಬ ಹೆಸರಿಟ್ಟಿದ್ದ ನಮೀಬಿಯಾ ಚೀತಾಗೆ ASHA ಬದಲು AASHA ಎಂದು ಮರುನಾಮಕರಣ ಮಾಡಲಾಗಿದೆ. ಮತ್ತು ಓಬನ್ (Oban) (ಗಂಡು) ಚೀತಾಗೆ ಪವನ್‌ (Pavan) ಎಂದು ಮರು ನಾಮಕರಣ ಮಾಡಲಾಗಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಫಿಂಡಾ (Phinda) ಎಂಬ ಚೀತಾಗೆ ನಿರ್ವಾ (Nirva) ಎಂದು ಹೆಸರಿಡಲಾಗಿದೆ. ಇದೇ ರೀತಿ ಉಳಿದ ಚೀತಾ ಹೆಸರುಗಳೂ ಬದಲಾಗಿವೆ.

ಇನ್ನು, ಈ ಚೀತಾಗಳಿಗೆ ಹೊಸ ಹೆಸರುಗಳನ್ನು ಸೂಚಿಸಿದ ಸ್ಪರ್ಧೆಯ ವಿಜೇತರನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಅಭಿನಂದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!