ಫ್ರಾನ್ಸ್ ನಲ್ಲಿ 48 ಅಂತಸ್ತಿನ ಗಗನಚುಂಬಿ ಕಟ್ಟಡ ಹತ್ತಿದ ಸ್ಪೈಡರ್‌ ಮ್ಯಾನ್!‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
“ಫ್ರೆಂಚ್ ಸ್ಪೈಡರ್‌ಮ್ಯಾನ್” ಎಂದು ಕರೆಸಿಕೊಳ್ಳುವ ಅಲೈನ್ ರಾಬರ್ಟ್ ಪ್ಯಾರಿಸ್‌ನಲ್ಲಿ 48 ಅಂತಸ್ತಿನ ಗಗನಚುಂಬಿ ಕಟ್ಟಡವನ್ನು ಏರಿದ್ದಾರೆ. ಅವರು ತಮ್ಮ 60ನೇ ವಯಸ್ಸನ್ನು ತಲುಪಿದಾಗ ಈ ಸಾಧನೆ ಮಾಡುವ ಗುರಿಯನ್ನು ಹೊಂದಿದ್ದರು.
ಕೆಂಪು ವಸ್ತ್ರವನ್ನು ಧರಿಸಿದ ರಾಬರ್ಟ್ ಅವರು 187-ಮೀಟರ್ (613-ಅಡಿ) ಎತ್ತರವಿರುವ ಟೂರ್ ಟೋಟಲ್ ಎನರ್ಜಿಸ್ ಕಟ್ಟಡದ ಮೇಲ್ಭಾಗವನ್ನು ತಲುಪಿದಾಗ ತಮ್ಮ ತೋಳುಗಳನ್ನು ಮೇಲಕ್ಕೆತ್ತಿ ಹರ್ಷ ವ್ಯಕ್ತಪಡಿಸಿದರು. ಇದು ಫ್ರೆಂಚ್ ರಾಜಧಾನಿಯ ಲಾ ಡಿಫೆನ್ಸ್ ವ್ಯಾಪಾರ ಕೇಂದ್ರದ ಗೋಪುರವಾಗಿದೆ.

“60 ವರ್ಷಗಳು ಮನುಷ್ಯನ ಜೀವಿತದಲ್ಲಿ ಏನೂ ಅಲ್ಲ ಎಂಬ ಸಂದೇಶವನ್ನು ಜನರಿಗೆ ಕಳುಹಿಸಲು ನಾನು ಬಯಸುತ್ತೇನೆ. ನೀವು ಇನ್ನೂ ಕ್ರೀಡೆಯಲ್ಲಿ ತೊಡಗಬಹುದು. ಸಕ್ರಿಯರಾಗಿರಿ, ಅಸಾಧಾರಣ ಕೆಲಸಗಳನ್ನು ಮಾಡುತ್ತಿರಿ” ಎಂದು ರಾಬರ್ಟ್ ಕರೆನೀಡಿದರು. ಕಳೆದ ತಿಂಗಳು ರಾಬರ್ಟ್‌ ತಮ್ಮ 60 ನೇ ಜನ್ಮದಿನ ವನ್ನು ಆಚರಿಸಿಕೊಂಡಿದ್ದರು.

“ನಾನು 60 ನೇ ವಯಸ್ಸನ್ನು ತಲುಪಿದಾಗ ಆ ಗೋಪುರವನ್ನು ಏರುತ್ತೇನೆ ಎಂದು ನಾನು ಹಲವಾರು ವರ್ಷಗಳ ಹಿಂದೆ ಅಂದುಕೊಂಡಿದ್ದರೆ. ಏಕೆಂದರೆ ಫ್ರಾನ್ಸ್‌ನಲ್ಲಿ 60 ನಿವೃತ್ತಿ ವಯಸ್ಸನ್ನು ಸಂಕೇತಿಸುತ್ತದೆ. ಈ ವಯಸ್ಸಿನಲ್ಲಿ ಈ ಸಾಧನೆ ಮಾಡುವುದು ಉತ್ತಮವಾಗಿರುತ್ತದೆ ನಾನು ಭಾವಿಸಿದೆ” ಎಂದು ಅವರು ತಿಳಿಸಿದರು.
ಹವಾಮಾನ ಬದಲಾವಣೆಯ ಕ್ರಮದ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ರಾಬರ್ಟ್ ಈ ಆರೋಹಣವನ್ನು ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!