Wednesday, October 5, 2022

Latest Posts

ಪರಿಸರ ಸಂರಕ್ಷಣೆಗಾಗಿ 24 ಸಾವಿರ ಕೋಟಿ ರೂ. ಬೆಲೆ ಬಾಳುವ ಕಂಪನಿ ದಾನ ಮಾಡಿದ ಉದ್ಯಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪರಿಸರ ಸಂರಕ್ಷಣೆಗೆ ಪರಿಸರ ಪ್ರೇಮಿಗಳೂ, ಸರ್ಕಾರ ಶ್ರಮಿಸುತ್ತಿದ್ದಾರೆ. ಸರ್ಕಾರ ಪರಿಸರ ಕಾಳಜಿ ಕುರಿತು ಜನರಿಗೆ ಹಲವು ಮಹತ್ವದ ಸಲಹೆಗಳನ್ನು ನೀಡಲಾಗುತ್ತಿದೆ. ಆದರೆ ಒಂದೇ ಬಾರಿಗೆ ಸಾವಿರಾರು ಕೋಟಿ ರೂಪಾಯಿ ದಾನ ನೀಡುವುದು ಸುಲಭದ ಮಾತಲ್ಲ. ಹೃದಯ ವೈಶಾಲ್ಯತೆ, ಪರಿಸರ ಸಂರಕ್ಷಣೆಗೆ ಸಮರ್ಪಣಾ ಭಾವ ಇರಬೇಕು. ಅಮೆರಿಕದ ಬಿಲಿಯನೇರ್ ಪ್ಯಾಟಗೋನಿಯಾ ಫ್ಯಾಶನ್ ಕಂಪನಿಯ ಸಂಸ್ಥಾಪಕ ʻಯವೊನ್ ಚೌನಾರ್ಡ್ʼ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಕಂಪನಿಯನ್ನೇ ದಾನವಾಗಿ ನೀಡುವ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದಾರೆ.

Patagonia: Billionaire boss gives fashion firm away to fight climate change  - BBC News

ಪ್ಯಾಟಗೋನಿಯಾ ಫ್ಯಾಶನ್ ಕಂಪನಿಯ ಸಂಸ್ಥಾಪಕರಾದ ಯವೋನ್ ಚೌನಾರ್ಡ್ ತಮ್ಮ 24 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿ ಅಷ್ಟೇ ಅಲ್ಲದೆ, ಅವರ ಕುಟುಂಬದ ಎಲ್ಲಾ ಆಸ್ತಿಯನ್ನು ಸಹ ದತ್ತಿ ಸಂಸ್ಥೆಗೆ ವರ್ಗಾಯಿಸಿದರು. ಹವಾಮಾನ ಬದಲಾವಣೆ, ಜೀವವೈವಿಧ್ಯ ಮತ್ತು ಅರಣ್ಯ ಭೂಮಿ ಸಂರಕ್ಷಣೆಗೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಕಾರ್ಯಕ್ರಮಗಳಿಗೆ ಈ ಮೊತ್ತವನ್ನು ಖರ್ಚು ಮಾಡಲಾಗುತ್ತದೆ. ಸಂಸ್ಥೆಗೆ ಬರೆದ ಪತ್ರದಲ್ಲಿ ‘ಈ ಭೂಮಿ ಈಗ ನಮ್ಮ ಏಕೈಕ ಷೇರುದಾರರಾಗಿದ್ದಾರೆ’ ಎಂದು ಯವೋನ್ ಚೌನಾರ್ಡ್ ಬಹಿರಂಗಪಡಿಸಿದ್ದಾರೆ.

US: Billionaire gives away company to fight climate change - News | Khaleej  Times

ಅಮೆರಿಕನ್ ಪ್ಯಾಟಗೋನಿಯಾದ ಸಂಸ್ಥಾಪಕರಾದ ವೈವೊನ್ ಚೌನಾರ್ಡ್ 50 ವರ್ಷಗಳ ಹಿಂದೆ ಪ್ರಾರಂಭಿಸಿದ ಕಂಪನಿಯನ್ನು ದಾನ ಮಾಡಿದ್ದಾರೆ. ಅವರ ವ್ಯವಹಾರದಲ್ಲಿ ಅವರ ಪತ್ನಿ ಮತ್ತು ಮಕ್ಕಳು ಸಹ ಷೇರುದಾರರಾಗಿದ್ದಾರೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಕಂಪನಿಯ ವ್ಯಾಲ್ಯೂ ಸುಮಾರು $3 ಬಿಲಿಯನ್ ಮೌಲ್ಯದ್ದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!