ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಖ್ಯಾತ ಜ್ಯೋತಿಷಿ ಎಸ್.ಕೆ. ಜೈನ್ ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಕರ್ನಾಟಕದ ವಿದ್ಯುನ್ಮಾನ ಮಾಧ್ಯಮದ ಮೊಟ್ಟ ಮೊದಲ ಜ್ಯೋತಿಷಿ ಎಂದು ಹೆಸರು ಗಳಿಸಿದ್ದ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ (67) ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.
ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸೆರೆಳೆದಿದ್ದು, ಪತ್ನಿ , ಓರ್ವ ಪುತ್ರಿಯನ್ನ ,ಬಂದುಬಳಗವನ್ನ ಅಗಲಿದ್ದಾರೆ .

1957, ಅಕ್ಟೋಬರ್ 13ರಂದು ಜನಿಸಿದ್ದ ಎಸ್ ಕೆ ಜೈನ್ , ಮೂಲತಃ ದಕ್ಷಿಣ ಕನ್ನಡದವರಾಗಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲೇ.

ಇವರ ತಂದೆ ಬಿ ಜಿ ಶಶಿಕಾಂತ್ ಜೈನ್ ಹೆಸರಾಂತ ಜ್ಯೋತಿಷಿಗಳಾಗಿದ್ದವರು. ಜ್ಯೋತಿರ್ವಿದ್ಯೆಯಲ್ಲಿ ಇಡೀ ದೇಶದಲ್ಲಿ ಹೆಸರು ಮಾಡಿದ್ದ ದಿವಂಗತ ಬಿ ಜಿ ಶಶಿಕಾಂತ್ ಜೈನ್ ರ ಪುತ್ರ ಎಸ್ ಕೆ ಜೈನ್ ಮೊದಲಿಗೆ ಇಂಜಿನಿಯರ್ ಆಗಬೇಕೆಂದುಕೊಂಡವರು. ಆದರೆ ಅದನ್ನ ಕೈಬಿಟ್ಟು ತಂದೆಯ ಬಳಿಯಲ್ಲಿ ಜ್ಯೋತಿಷ್ಯವನ್ನ ಕಲಿಯಲು ನಿಂತರು. ಬಳಿಕ ದೇಶ ವಿದೇಶಗಳಲ್ಲಿ ಹೆಸರು ಮಾಡಿದರು.

ಹಬ್ಬ-ಹರಿದಿನ, ಗ್ರಹಣ ಸೇರಿದಂತೆ ವಿಶೇಷ ದಿನಗಳಂದು ವಾಹಿನಿಗಳಲ್ಲಿ ರಾಶಿ ಫಲಾಫಲ ಸೇರಿದಂತೆ ದಿನದ ವಿಶೇಷತೆಗಳ ಬಗ್ಗೆ ಜ್ಯೋತಿಷ್ಯ ಹೇಳುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!