September 2, 2026
Wednesday, September 2, 2026
spot_img

ರೇಣುಕಾಸ್ವಾಮಿ ಕೊ*ಲೆ ಕೇಸ್‌: ಎವಿಡೆನ್ಸ್ ಬುಕ್ ಹಿಡಿದು ಬಂದ ಪ್ರದೋಶ್, ದರ್ಶನ್‌ ಕಥೆ ಏನಾಗಬಹುದು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಮರ್ಡರ್‌ಕೇಸ್‌ನಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ದರ್ಶನ್‌ ಜತೆಗೆ ಇದ್ದವರೆಲ್ಲ ಇದೀಗ ವಿರುದ್ಧವಾಗಿ ಸಾಕ್ಷಿ ಹೇಳುತ್ತಿದ್ದಾರೆ. ದರ್ಶನ್‌ ಗೆಳೆಯ ಪ್ರದೋಶ್‌ ಕೊಲೆಯ ದಿನ ಏನಾಯ್ತು? ಕೊಲೆ ಹಿಂದೆ ಯಾರಿದ್ದಾರೆ? ಯಾರು ಯಾವ ಕೆಲಸ ಮಾಡಿದ್ರು ಎಂಬೆಲ್ಲಾ ಮಾಹಿತಿಯನ್ನು ಬಿಚ್ಚಿಟ್ಟು ತಪ್ಪೊಪ್ಪಿಕೊಳ್ಳಲು ತಯಾರಾಗಿದ್ದಾರೆ. ತಮ್ಮ ಸ್ಟೇಟ್‌ಮೆಂಟ್‌ ದಾಖಲಿಸಲು ಪ್ರದೋಶ್‌ ಕೋರ್ಟ್‌ ಮೆಟ್ಟಿಲು ಏರಿದ್ದಾರೆ.

ಹೈಕೋರ್ಟ್​ನಲ್ಲಿ ಮಾಫಿ ಸಾಕ್ಷಿ ಹೇಳಿಕೆ ಸಂಬಂಧ ದರ್ಶನ್​ ಸಲ್ಲಿಸಿರೋ ಅರ್ಜಿ ವಿಚಾರಣೆ ನಡೆಯುವ ಹಿನ್ನೆಲೆ ಸೆಷನ್ಸ್​ ಕೋರ್ಟ್​​ ಪ್ರದೋಶ್ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆಯನ್ನು ಮುಂದೂಡಿಕೆ ಮಾಡಿ ಆದೇಶ ನೀಡಿದೆ. ಹೇಳಿಕೆ ದಾಖಲು ಮಾಡಲು ಕೋರ್ಟ್​​ಗೆ ಬಂದ ಪ್ರದೋಶ್ ಕೈಯಲ್ಲಿ ಸಾಕ್ಷಿ ಪುಸ್ತಕವಿತ್ತು, ಇದನ್ನ ಆರೋಪಿ ಪ್ರದೋಶ್ ಮಾಧ್ಯಮಗಳ ಕ್ಯಾಮೆರಾಗೆ ತೋರಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರದೂಷ್ ಮಾಫಿ ಸಾಕ್ಷಿ ದಾಖಲು ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಕೆಯಾದ ಅರ್ಜಿ ಆದೇಶ ಇಂದು ಹೊರಬೀಳಲಿದ್ದು, ಹೈಕೋರ್ಟ್ ಆದೇಶದತ್ತ ಕುತೂಹಲ ಹೆಚ್ಚಿದೆ. ಮಾಫಿ ಸಾಕ್ಷಿಗೆ ಒಪ್ಪಿಗೆ ಸಿಗುತ್ತಾ ಅಥವಾ ತಡೆ ಆಗುತ್ತಾ? ಇಲ್ಲವಾದಲ್ಲಿ ಮಾಫಿ ಸಾಕ್ಷಿ ಕುರಿತಾಗಿ ನಿಯಮದ ಅನುಸರಣೆ ಬಗ್ಗೆ ಆದೇಶವಾಗುತ್ತಾ? ಜೈಲಿನಲ್ಲಿ ಕುಳಿತಿರುವ ದರ್ಶನ್‌ ಕಥೆ ಏನಾಗಲಿದೆ ಎಂದು ನೋಡಲು ಜನ ಕಾದುಕುಳಿತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !