September 23, 2026
Wednesday, September 23, 2026
spot_img

ಸಿಎಂ ಡಿ.ಕೆ. ಶಿವಕುಮಾರ್‌ ಶೋ ಮ್ಯಾನ್‌ ಅಷ್ಟೇ, ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ ಎಂದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಖಜಾನೆಯಲ್ಲಿ ದುಡ್ಡೇ ಇಲ್ಲ, ಹೊರಗಿನಿಂದ ನೋಡೋಕೆ ಎಲ್ಲವೂ ಚೆನ್ನಾಗಿಯೇ ಕಾಣುತ್ತಿದೆ. ಹೊಸ ಹೊಸ ಯೋಜನೆಗಳು, ಗ್ಯಾರಂಟಿಗಳನ್ನು ಸರ್ಕಾರ ನೀಡುತ್ತಿದೆ. ಆದರೆ ರಿಯಾಲಿಟಿ ತುಂಬಾ ಕೆಟ್ಟದಾಗಿದೆ ಎಂದು ರಾಜ್ಯ ಬಿಜೆಪಿ ಹೇಳಿದೆ.

ರಾಜ್ಯದ ಮೇಲೆ ಬರೋಬ್ಬರಿ ₹8.24 ಲಕ್ಷ ಕೋಟಿ ಸಾಲ ಇದೆ. ಆರ್ಥಿಕ ಇಲಾಖೆ ರೆಡ್‌ ಸಿಗ್ನಲ್‌ ನೀಡಿದೆ. ಖಜಾನೆಯಲ್ಲಿ ದುಡ್ಡಿಲ್ಲ, ಬೇಕಾಬಿಟ್ಟಿ ಯೋಜನೆಗಳನ್ನು ಘೋಷಣೆ ಮಾಡುವುದನ್ನು ಬಿಟ್ಟು ರಿಯಾಲಿಟಿ ಅರಿತುಕೊಳ್ಳಿ ಎಂದು ನಾವು ಹೇಳ್ತಿಲ್ಲ. ನಮ್ಮದೇ ರಾಜ್ಯದ ಆರ್ಥಿಕ ಇಲಾಖೆ ಹೇಳಿದೆ ಎಂದಿದ್ದಾರೆ.

ಸಿಎಂ ಡಿ.ಕೆ. ಶಿವಕುಮಾರ್‌ ಶೋ ಮ್ಯಾನ್‌ ಆಗಿದ್ದಾರೆ. ಹೊರಗಿನಿಂದ ಎಲ್ಲವೂ ಚೆನ್ನಾಗಿ ಕಾಣುವ ಹಾಗೆ ಮಾಡ್ತಾ ಇದ್ದಾರೆ. ಇದೆಲ್ಲ ಬರೀ ತೋರಿಕೆ. ಜನರಿಗೆ ಹೊಸ ಹೊಸ ಯೋಜನೆಗಳ ಘೋಷಣೆ ಬೇಕಿಲ್ಲ. ಮೂಲಭೂತ ಸೌಕರ್ಯ ಕೊಟ್ಟರೆ ಸಾಕಾಗಿದೆ. ಹಣದ ಕೊರತೆ ಇರುವ ಕಾರಣ ಸಾರಿಗೆ ಸಂಸ್ಥೆಗಳು, ನೀರಾವರಿ ನಿಗಮಗಳು, ವಿದ್ಯುತ್‌ ಕಂಪನಿಗಳಿಗೆ ಬಾಕಿ ಇರುವ ಹಣವನ್ನು ನೀಡಲು ಆಗುತ್ತಿಲ್ಲ. ಇದರ ನಡುವೆ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಹಾಗೂ ಭಾರತ್‌ ಜೋಡೋ ಯುವ ಕ್ಲಬ್‌ಗಳಿಗೆ ಕೋಟಿ ಕೋಟಿ ಅನುದಾನ ಘೋಷಣೆ ಮಾಡಿದ್ದಾರೆ. ಎಲ್ಲಿದೆ ದುಡ್ಡು? ಬಜೆಟ್‌ನಲ್ಲಿ ಅನುದಾನ ಹಂಚಿಕೆ ಆಗಿದ್ಯಾ? ಗುತ್ತಿಗೆದಾರರಿಗೆ ದುಡ್ಡು ಕೊಟ್ಟಿಲ್ಲ, ಕೆಲಸ ಕಾರ್ಯಗಳು ದುಡ್ಡಿಲ್ಲದೇ ಅರ್ಧಕ್ಕೆ ನಿಂತುಹೋಗಿವೆ. ಖಜಾನೆ ಖಾಲಿ ಮಾಡಿಕೊಂಡು, ಖಾಲಿ ಘೋಷಣೆ ಮಾಡುತ್ತಿರುವ ಸಿಎಂ ಡಿಕೆಶಿ ಅವರ ಖಾಲಿಪ್ರಚಾರದ ತಂತ್ರಗಳ ಮೂಲಕ ಕರ್ನಾಟಕದ ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಬಿಜೆಪಿ ದೂರಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !