ಹೊಸ ದಿಗಂತ ವರದಿಕಲಬುರಗಿ:
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-೧೧ ಆರೋಪಿ, ನಟ ದರ್ಶನ್ ಆಪ್ತ ಮ್ಯಾನೇಜರ್ ನಾಗಾ ಅಲಿಯಾಸ್ ನಾಗರಾಜ್ ನನ್ನು ಶನಿವಾರ ಸಂಜೆ ಕಲಬುರಗಿ ನಗರದ ಹೊರವಲಯದ ಕೇಂದ್ರ ಕಾರಾಗೃಹಕ್ಕೆ ಬಿಗಿ ಪೋಲಿಸ್ ಬಂದೋಬಸ್ತ್ ಗಳ ನಡುವೆ ಕರೆತರಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ರಾಜಾತಿಥ್ಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜೈಲೂಗಳಿಗೆ ಆರೋಪಿಗಳನ್ನು ಹಸ್ತಾಂತರಿಸಿದ್ದು, ಪ್ರಕರಣದ ಎ-೧೧ ಆರೋಪಿಯಾಗಿರುವ ನಾಗರಾಜ್ ನನ್ನು ಪೋಲಿಸರು ಕರೆತಂದಿದ್ದಾರೆ.
ಆರೋಪಿ ನಾಗರಾಜ್ ಜೊತೆಗೆ ಪ್ರಕರಣದ ಜೊತೆಗೆ ಎ-೧೦ ಆರೋಪಿಯಾಗಿರುವ ವಿನಯ್,ನನ್ನು ವಿಜಯಪುರದ ಕಾರಾಗೃಹಕ್ಕೆ ಬಿಟ್ಟ ಬಳಿಕ,ಎ-೧೧ ಆರೋಪಿಯಾದ ನಾಗರಾಜ್,ನನ್ನು ಪೋಲಿಸರು ಕರೆತಂದಿದ್ದು, ಕಲಬುರಗಿ ಕೇಂದ್ರ ಕಾರಾಗೃಹದ ಗೇಟ್ ಬಳಿಯ ತಪಾಸಣೆ ಕೋಣೆಯಲ್ಲಿ ಸಾಮಾನ್ಯ ಕೈದಿಗಳಂತೆ ನಾಗರಾಜ್,ನ ತಪಾಸಣೆ ಮಾಡಿ ಪೋಲಿಸರು ಹಾಗೂ ಜೈಲಿನ ಸಿಬ್ಬಂದಿ ಒಳಗಡೆ ಕರೆದೊಯ್ದಿದ್ದು, ಕಾರಾಗೃಹದ ಒಳಗಡೆಯೇ ಆರೋಪಿ ನಾಗರಾಜ್,ನ ವೈದ್ಯಕೀಯ ಪರೀಕ್ಷೆ ನಡೆಸಲಿದ್ದಾರೆ.