ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ಸಹಿತ ಎಲ್ಲ ಆರೋಪಿಗಳು ಪೊಲೀಸ್ ಕಸ್ಟಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್ , ಅವರ ಎರಡನೇ ಪತ್ನಿ ಪವಿತ್ರಾ ಗೌಡ ಮತ್ತು ನಟನ ಆಪ್ತರು ಸೇರಿ 13 ಮಂದಿಗಳನ್ನು ಪೊಲೀಸ್‌ ಕಸ್ಟಡಿಗೆ ನ್ಯಾಯಾಲಯ ಒಪ್ಪಿಸಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ ಆರೋಪಿಗಳ ಮೆಡಿಕಲ್ ಟೆಸ್ಟ್‌ ಮಾಡಿದ ಬಳಿಕ 13 ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದರು. ಪ್ರಕರಣದಲ್ಲಿ ಪವಿತ್ರಗೌಡ ಆರೋಪಿ ನಂಬರ್ 1 ಆಗಿದ್ದು, ದರ್ಶನ್ ಆರೋಪಿ ನಂಬರ್ 2 ಆಗಿದ್ದಾರೆ.

ಆರೋಪಿಗಳ ಪಟ್ಟಿ ಇಂತಿದೆ
A1.ಪವಿತ್ರಾಗೌಡ
A2.ದರ್ಶನ್
A3.ಪವನ್
A4.ವಿನಯ್
A5.ಪ್ರದೋಶ್
A6.ನಂದೀಶ್
A7.ದೀಪಕ್
A8.ಲಕ್ಷ್ಮಣ್
A9.ನಾಗರಾಜು
A10.ಕಾರ್ತಿಕ್
A11.ನಿಕಿಲ್
A12.ಕೇಶವಮೂರ್ತಿ
A13.ರಾಘವೇಂದ್ರ

ದರ್ಶನ್‌ ಎರಡನೇ ಪತ್ನಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿರುವ ಆರೋಪದ ಹಿನ್ನೆಲೆ ಜೂನ್ 8ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ತಂದು ಪಟ್ಟಣಗೆರೆ ಸಮೀಪದ ಶೆಡ್‌ನಲ್ಲಿಟ್ಟು ಚಿತ್ರಹಿಂಸೆ ನೀಡಿ ಕೊಲ್ಲಲಾಗಿತ್ತು. ಜೂನ್‌ 9ರಂದು ಮೃತದೇಹ ಸುಮನಹಳ್ಳಿ ಬ್ರಿಡ್ಜ್‌ ಬಳಿ ಪತ್ತೆಯಾಗಿತ್ತು. ತನಿಖೆ ನಡೆಸಿದಾಗ ಪೊಲೀಸರಿಗೆ ದರ್ಶನ್ ಮತ್ತು ಗ್ಯಾಂಗ್ ಪಾತ್ರವಿರುವ ಬಗ್ಗೆ ತಿಳಿದುಬಂದಿತ್ತು. ಜೂನ್‌ 10 ರಂದು ಮೂವರ ಬಂಧನವಾಗಿತ್ತು. ಜೂನ್‌ 11 ರಂದು ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!