ಯುವ-ಶ್ರೀದೇವಿ ಭೈರಪ್ಪ ವಿಚ್ಛೇದನ ವಿಚಾರ: ಸಪ್ತಮಿ ಗೌಡ ಹೆಸರು ತಳುಕು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಾಘವೇಂದ್ರ ರಾಜ್‌ಕುಮಾರ್‌ ಅವರ 2ನೇ ಪುತ್ರ ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ನಡುವಿನ ವಿಚ್ಛೇದನ ವಿಚಾರದಲ್ಲಿ ಸ್ಯಾಂಡಲ್ ವುಡ್ ನಟಿಯ ಹೆಸರು ಉಲ್ಲೇಖವಾಗಿದೆ.

ಯುವ ರಾಜ್‌ಕುಮಾರ್‌ ಅವರು ಕಳಿಸಿದ್ದ ವಿಚ್ಛೇದನ ನೊಟೀಸ್ ಗೆ ಲಾಯರ್ ಮೂಲಕವೇ 12 ಪುಟಗಳ ಉತ್ತರ ನೀಡಿರುವ ಶ್ರೀದೇವಿ ಭೈರಪ್ಪ, ಯುವ ರಾಜ್‌ಕುಮಾರ್‌ ಮೇಲೆ ಹಲವು ಆರೋಪಗಳನ್ನು ಮಾಡಿದ್ದಾರೆ. ಜೊತೆಗೆ ಕಾಂತಾರದಲ್ಲಿ ಲೀಲಾ ಪಾತ್ರದ ಮೂಲಕ ಕನ್ನಡದ ಜನತೆಗೆ ಚಿರಪರಿಚಿತರಾಗಿರುವ ನಟಿ ಸಪ್ತಮಿ ಗೌಡ ಅವರ ಹೆಸರನ್ನು ನೇರವಾಗಿ ಉಲ್ಲೇಖ ಮಾಡಿದ್ದಾರೆ.

ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್‌ ಇಬ್ಬರೂ ಹೊಟೇಲ್ ರೂಮ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು ಎಂದು ಆರೋಪಿಸಿದ್ದಾರೆ.

ಸಪ್ತಮಿ ಗೌಡ ಹಾಗೂ ಯುವ ರಾಜ್‌ಕುಮಾರ್ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಯುವ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು.

‘ಯುವ ಅವರ ವರ್ತನೆಯಿಂದ ನನಗೆ ಬಹಳ ಆಘಾತವಾಗಿದೆ. ಅದಲ್ಲದೆ, ಅವರ ಕುಟುಂಬವೂ ನನಗೆ ಅನ್ಯಾಯ ಮಾಡಿದೆ. ನಾನು ಕಾನೂನು ಬದ್ಧವಾಗಿ ಯುವ ಅವರನ್ನು ವಿವಾಹವಾಗಿದ್ದೇನೆ. 9 ವರ್ಷಗಳಿಂದ ಯುವ ಅವರ ಕುಟುಂಬ ನನಗೆ ಪರಿಚಯ. ಮದುವೆಯಾದ ದಿನದಿಂದ ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಆದರೆ, ಕುಟುಂಬದ ಗೌರವದ ಕಾರಣಕ್ಕಾಗಿ ನಾನು ಇದನ್ನು ಎಲ್ಲೂ ಹೇಳಿರಲಿಲ್ಲ. ಯುವ ರಾಜ್‌ಕುಮಾರ್‌ ಅವರಿಗೆ ಸಹ ನಟಿ ಸಪ್ತಮಿ ಗೌಡ ಅವರ ಜೊತೆ ಅಫೇರ್‌ ಇದೆ. 2023ರ ಡಿಸೆಂಬರ್‌ನಲ್ಲಿ ನಾನು ಬೆಂಗಳೂರಿಗೆ ಬಂದಿದ್ದಾಗ ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಗಲಾಟೆಯಾಗಿತ್ತು. ಯುವ ಸಿನಿಮಾದ ನಟಿಯಾಗಿದ್ದ ಸಪ್ತಮಿ ಗೌಡ ಅವರೊಂದಿಗೆ ಯುವ ರಾಜ್‌ಕುಮಾರ್‌ಗೆ ಕಳೆದ ಒಂದು ವರ್ಷದಿಂದ ಅನೈತಿಕ ಸಂಬಂಧ ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ನನ್ನ ಕುಟುಂಬ ಹಾಗೂ ಸ್ನೇಹಿತರು ಗಮನಕ್ಕೆ ತಂದಿದ್ದರು’ ಎಂದು ಶ್ರೀದೇವಿ ಭೈರಪ್ಪ ನೊಟೀಸ್ ನಲ್ಲಿ ಬರೆದಿದ್ದಾರೆ.

ಯುವ ನನಗಿಂತ 4 ವರ್ಷ ಕಿರಿಯ. ಮದುವೆಯಾಗುವ ಮುನ್ನ ಐದು ವರ್ಷಗಳ ನಾವು ಜೊತೆಯಾಗಿದ್ದೆವು. ಆದರೆ, ಈಗ ತಮ್ಮ ಜವಾಬ್ದಾರಿಗಳಿಂದ ಅವರು ನುಣಿಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಯುವ ರಾಜ್‌ಕುಮಾರ್‌ ಹಾಗೂ ಸಪ್ತಮಿ ಗೌಡ ಹೊಟೇಲ್ ರೂಮ್‌ನಲ್ಲಿ ಜೊತೆಯಾಗಿ ಇದ್ದಾಗಲೇ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದರು. ಇದು ನನಗೆ ಯುವ ರಾಜ್‌ಕುಮಾರ್‌ ಹಾಗೂ ಸಪ್ತಮಿ ಗೌಡ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಕಾಗಿದೆ’ ಎಂದು ಶ್ರೀದೇವಿ ಭೈರಪ್ಪ ತಿಳಿಸಿದ್ದಾರೆ.

ಇನ್ನು ಶ್ರೀದೇವಿ ಭೈರಪ್ಪ ವಿರುದ್ಧ ಯುವ ರಾಜ್‌ಕುಮಾರ್‌ ಪರ ವಕೀಲ ಭಾರೀ ಆರೋಪಗಳನ್ನು ಮಾಡಿದ್ದರು. ಶ್ರೀದೇವಿಗೆ ಅನೈತಿಕ ಸಂಬಂಧವಿದೆ. ತನ್ನ ಬಾಯ್‌ಫ್ರೆಂಡ್‌ ರಾಧಯ್ಯನಿಂದ ಮಗು ಪಡೆದುಕೊಳ್ಳುವ ನಿರ್ಧಾರವನ್ನೂ ಮಾಡಿದ್ದರು ಎಂದು ವಕೀಲ ಸಿರಿಲ್‌ ಪ್ರಸಾದ್‌ ಹೇಳಿದ್ದಾರೆ.

ಇನ್ನೊಂದೆಡೆ ನಟಿ ಸಪ್ತಮಿ ಗೌಡ ಕೂಡ ಆಕ್ರೋಶಗೊಂಡಿದ್ದು, ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಭೈರಪ್ಪ ಅವರ ವಿಚ್ಛೇದನದ ವಿಚಾರದಲ್ಲಿ ತಮ್ಮ ಹೆಸರನ್ನು ಎಳೆದು ತಂದಿದ್ದಕ್ಕಾಗಿ ಯುವ ಅವರ ಪತ್ನಿ ಶ್ರೀದೇವಿ ವಿರುದಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!