October 27, 2026
Tuesday, October 27, 2026
spot_img

ರೇಣುಕಾಸ್ವಾಮಿ ಕೊ*ಲೆ ಪ್ರಕರಣ : ಐ ವಿಟ್ನೆಸ್‌ ಪುನೀತ್ ವಿಚಾರಣೆಗೆ ಗೈರು, ಬಂಧನಕ್ಕೆ ವಾರೆಂಟ್‌ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಬಿರುಸಿನಿಂದ ನಡೆಯುತ್ತಿದ್ದು, ಇಂದು ಇಬ್ಬರು ಪ್ರತ್ಯಕ್ಷ ಸಾಕ್ಷಿಗಳು ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ವಿಚಾರಣೆಗೆ ಹಾಜರಾಗದ ಸಾಕ್ಷಿ ವಿರುದ್ಧ ಬಂಧನದ ವಾರೆಂಟ್‌ ಜಾರಿಯಾಗಿದೆ.

ಪಟ್ಟಣಗೆರೆಯ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕಿರಣ್‌ ಹಾಗೂ ಪುನೀತ್‌ ಪ್ರತ್ಯಕ್ಷವಾಗಿ ರೇಣುಕಾಸ್ವಾಮಿ ಕೊಲೆಯನ್ನು ನೋಡಿದ್ದಾರೆ. ಹೀಗಾಗಿ ಅವರ ಸಾಕ್ಷ್ಯಗಳು ಕೇಸ್‌ಗೆ ಅತ್ಯಂತ ಪ್ರಮುಖವಾಗಿದ್ದವು. ಆದರೆ ಇಂದು ಪುನೀತ್‌ ವಿಚಾರಣೆಗೆ ಗೈರಾಗಿದ್ದು, ಅರೆಸ್ಟ್‌ ವಾರೆಂಟ್‌ ಜಾರಿಯಾಗಿದೆ.

ಈ ಹಿಂದೆಯೇ ಇವರು ಚಾರ್ಜ್ ಶೀಟ್ ಭಾಗವಾಗಿ ಸಿಆರ್ ಪಿಸಿ 164 ಅಡಿಯಲ್ಲಿ‌ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದಾರೆ ಆದರೆ ಇಂದು ನ್ಯಾಯಾಲಯದಲ್ಲಿ ಇಬ್ಬರೂ ಹೇಳಿಕೆ ದಾಖಲಿಸಬೇಕಿತ್ತು. ಎಸ್​​ಪಿಪಿ ಅವರು ಇವರ ವಿಚಾರಣೆ ನಡೆಸಲಿದ್ದರು. ಆದರೆ ವಿಚಾರಣೆಗೆ ಪುನೀತ್ ಗೈರಾಗಿದ್ದಾರೆ. ಪುನೀತ್‌ ಡಿ ಕಂಪನಿ ಫ್ಯಾನ್‌ ಪೇಜ್‌ನ ಅಡ್ಮಿನ್‌ ಆಗಿದ್ದು, ಪಟ್ಟಣಗೆರೆ ಶೆಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ದರ್ಶನ್‌ ಜೊತೆ ಇವರಿಗೆ ಒಡಬಾಟ ಇತ್ತು. ಇದೇ ಪ್ರಕರಣದಲ್ಲಿ ಪುನೀತ್‌ರನ್ನು ಅರೆಸ್ಟ್‌ ಮಾಡಲಾಗಿತ್ತು. ಆದರೆ ಜಾಮೀನು ಪಡೆದು ಬಿಡುಗಡೆ ಆಗಿದ್ದರು. ಆದರೆ ಇದೀಗ ಪುನೀತ್ ಅವರು ವಿಚಾರಣೆಗೆ ಗೈರಾದ ಕಾರಣ ಅವರ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿದ್ದು, ಬಂಧನದ ವಾರೆಂಟ್ ಹೊರಡಿಸಲಾಗಿದೆ.

ಪುನೀತ್‌ ವಿಚಾರಣೆಗೆ ಹಾಜರಾಗದ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಜೊತೆಗೆ ನ್ಯಾಯಾಲಯವು ಪುನೀತ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಅನ್ನು ಹೊರಡಿಸಿದೆ. ಪುನೀತ್, ಈ ಪ್ರಕರಣದ ಪ್ರಮುಖ ಸಾಕ್ಷಿ ಆಗಿದ್ದಾರೆ. ರೇಣುಕಾ ಸ್ವಾಮಿ ಮೃತದೇಹವನ್ನು ಹೊತ್ತೊಯ್ದ ಸ್ಕಾರ್ಪಿಯೋ ವಾಹನ ಪುನೀತ್ ಅವರದ್ದೇ ಎನ್ನಲಾಗಿದೆ. ರೇಣುಕಾ ಸ್ವಾಮಿ ಶವದ ಸಾಗಾಟ ಮತ್ತು ಇತರೆ ಸಾಕ್ಷಿ ನಾಶಗಳಲ್ಲಿ ಪುನೀತ್ ತಮ್ಮನ್ನು ತೊಡಗಿಸಿಕೊಂಡಿದ್ದರು. ಹಾಗಾಗಿ ಪುನೀತ್ ಅನ್ನು ಈ ಹಿಂದೆ ಬಂಧಿಸಲಾಗಿತ್ತು.

Must Read