ಹೇ.. ಮೆಸೇಜ್‌ ಗೆ ರಿಪ್ಲೈ ಮಾಡು…! ವೈರಲ್‌ ಆಯ್ತು ಲಲಿತ್‌ ಮೋದಿಯ ಟ್ವೀಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಐಪಿಎಲ್‌ ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಹಾಗೂ ವಿಶ್ವಸುಂದರಿ ಸುಷ್ಮಿತಾ ಸೇನ್‌ ನಡುವಿನ ಸಂಬಂಧ ಈಗ ಮುಚ್ಚುಮರೆಯಾಗೇನೂ ಉಳಿದಿಲ್ಲ. ಮೊನ್ನೆಯಷ್ಟೇ ತಮ್ಮ ಹೊಸ ಸಂಬಂಧದ ಕುರಿತಾಗಿ ಲಲಿತ್‌ ಮೋದಿ ಬಹಿರಂಗಪಡಿಸಿರುವ ಬೆನ್ನಲ್ಲೇ ಅವರು ವರ್ಷಗಳ ಹಿಂದೆ ಮಾಡಿರುವ ಟ್ವೀಟ್‌ ಒಂದು ಇದೀಗ ವೈರಲ್‌ ಆಗಿದೆ.

2013ರಲ್ಲಿ ಲಲಿತ್‌ ಮೋದಿಯವರು ʼನನ್ನ ಎಸ್ಸೆಮ್ಮೆಸ್‌ ಗೆ ರಿಪ್ಲೈ ಮಾಡುʼ ಎಂದು ಸುಷ್ಮಿತಾ ಸೇನ್‌ ಅವರನ್ನು ಟ್ಯಾಗ್‌ ಮಾಡಿ ಟ್ವೀಟ್‌ ಮಾಡಿದ್ದರು. ಅದು ಈಗ ಮತ್ತೊಮ್ಮೆ ಎಲ್ಲೆಡೆ ವೈರಲ್‌ ಆಗ್ತಿದೆ. ಲಲಿತ್‌ ಮೋದಿಯವರ ಟ್ವೀಟ್‌ ಮಾದರಿಯಲ್ಲೇ ನೆಟ್ಟಿಗರು ತಮ್ಮಿಷ್ಟದ ಸಿನಿತಾರೆಯರನ್ನು ಟ್ಯಾಗ್‌ ಮಾಡಿ ಮೆಸೇಜ್‌ ಗೆ ರಿಪ್ಲೈ ಮಾಡಿ ಅಂತಿದಾರೆ.

ಲಲಿತ್ ಮೋದಿ ಅವರ ಮೇಲೆ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆಯ ಆರೋಪವಿದ್ದು  ಭಾರತವನ್ನು ತೊರೆದಿರುವ ಅವರು 2010 ರಿಂದ ಲಂಡನ್‌ನಲ್ಲಿದ್ದಾರೆ. 1994 ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿಜೇತರಾದ ಸುಶ್ಮಿತಾ ಸೇನ್, 1996 ರ ದಸ್ತಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅವರು ಬಿವಿ ನಂ 1, ಮೈನೆ ಪ್ಯಾರ್ ಕ್ಯೂನ್ ಕಿಯಾ, ಮೈ ಹೂ ನಾ ಮತ್ತು ನೋ ಪ್ರಾಬ್ಲಂ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!