ಗಣರಾಜ್ಯೋತ್ಸವ 2023: ತ್ರಿವರ್ಣದ ಪಾಕವಿಧಾನಗಳು ನಿಮ್ಮ ಮೆನುವಿನಲ್ಲಿರಲಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಯಾವುದೇ ಆಚರಣೆಯು ವಿಶೇಷ ಭಕ್ಷ್ಯಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಅಂಥದ್ದರಲ್ಲಿ ದೇಶಕ್ಕೆ ಮೀಸಲಾದ ವಿಶೇಷ ದಿನವನ್ನು ಸ್ಮರಿಸುವಾಗ (ಗಣರಾಜ್ಯೋತ್ಸವ) ವಿಶಿಷ್ಟ ಭಕ್ಷ್ಯಗಳಿಲ್ಲದಿದ್ದರೆ ಹೇಗೆ?. 1950 ರಲ್ಲಿ ಭಾರತದ ಸಂವಿಧಾನವು ಜಾರಿಗೆ ಬಂದಾಗಿನಿಂದ ಜನವರಿ 26 ವಿಶೇಷ ಆಚರಣೆಗೆ ಕರೆ ನೀಡುತ್ತದೆ. ದೇಶದ ವೈವಿಧ್ಯಮಯ ಸಂಸ್ಕೃತಿಗೆ ಗೌರವ ಸಲ್ಲಿಸಲು ನಿಮ್ಮ ಕೈಗಳಿಂದ ರುಚಿಯಾದ, ಶುಚಿಯಾದ ತ್ರಿವರ್ಣ ಪಾಕ ವಿಧಾನಗಳನ್ನು ಟ್ರೈ ಮಾಡಿ.

ತ್ರಿವರ್ಣ ಇಡ್ಲಿ: ದಕ್ಷಿಣ ಭಾರತೀಯ ಆಹಾರವನ್ನು ಇಷ್ಟಪಡದವರಿಲ್ಲ. ಆದ್ದರಿಂದ, ಒಂದೇ ಇಡ್ಲಿಯಲ್ಲಿ ಎಲ್ಲಾ ಮೂರು ಬಣ್ಣಗಳನ್ನು ಒಳಗೊಂಡಿರುವ ಸುಲಭವಾದ ಇಡ್ಲಿ ಪಾಕವಿಧಾನ ಮಾಡಬಹುದು. ಕೇಸರಿ ಬಣ್ಣಕ್ಕಾಗಿ ನೀವು ಕ್ಯಾರೆಟ್ ಪ್ಯೂರಿಯನ್ನು ಬಳಸಬಹುದು, ಬಿಳಿಗೆ ಸಾಮಾನ್ಯ ಇಡ್ಲಿ ಹಿಟ್ಟನ್ನು ಮತ್ತು ಹಸಿರುಗಾಗಿ ಪಾಲಕ ಪ್ಯೂರಿಯನ್ನು ಬಳಸಬಹುದು. ಆರೋಗ್ಯಕರ ಉಪಹಾರಕ್ಕಾಗಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ತ್ರಿವರ್ಣ ಇಡ್ಲಿಯನ್ನು ರೆಡಿ ಮಾಡಿ.

ತ್ರಿವರ್ಣ ಪುಲಾವ್/ ಬಿರಿಯಾನಿ: ಭಾರತದ ಪರಿಚಿತ ಮತ್ತು ಪ್ರಸಿದ್ಧ ಭಕ್ಷ್ಯಗಳಲ್ಲಿ ಪುಲಾವ್ ಅಥವಾ ಬಿರಿಯಾನಿಗೆ ಸ್ವಲ್ಪ ಬಣ್ಣವನ್ನು ಸೇರಿಸುವ ಮೂಲಕ ತ್ರಿವರ್ಣದ ರಂಗು ನೀಡಬಹುದು. ಕೇಸರಿ ಬಣ್ಣಕ್ಕೆ ಸ್ವಲ್ಪ ಒಣಮೆಣಸಿನ ಖಾರದ ಪುಡಿ ಬಳಸಿ, ಬಿಳಿಗೆ ಯಾವುದೇ ಬಣ್ಣವಿಲ್ಲದೆ ಹಾಗೆ ಮಾಡಿ, ಹಸಿರು ಬಣ್ಣಕ್ಕೆ ಹಸಿ ಮೆಣಸು ಹಾಗೆ ಕೊತ್ತಂಬರಿ, ಪುದೀನಾ ಬಳಸಿ ಮಾಡಿ.

ತ್ರಿವರ್ಣ ದೋಸೆ: ಬೆಳಗಿನ ತಿಂಡಿ ಮಾಮೂಲಿ ಎಲ್ಲರ ಮನೆಯಲ್ಲೂ ದೋಸೆ ಕಾಮನ್.‌ ಗಣರಾಜ್ಯೋತ್ಸವದಂದು ಹಿಟ್ಟಿಗೆ ತ್ರವರ್ನದ ಮೆರುಗು ನೀಡಿ. ಕೇಸರಿ ಬಣ್ಣಕ್ಕೆ ಕ್ಯಾರೆಟ್‌ ಪ್ಯೂರಿ, ಬಿಳಿಗೆ ಸಾದಾ ಹಿಟ್ಟು, ಹಸಿರುಗೆ ಪಾಲಾಕ್‌ ಸೊಪ್ಪಿನ ಪ್ಯೂರಿ ಮಾಡಿ ದೋಸೆ ರೆಡಿ ಮಾಡಿ.

Recipes & Food| ತ್ರಿವರ್ಣದ ಮೊಮೋಸ್‌ | Prajavani

ತ್ರಿವರ್ಣ ಫ್ರೂಟ್‌ ಸಲಾಡ್:‌ ಇದು ಬಹಳ ಸುಲಭ, ನಿಮಗಿಷ್ಟವಾದ ಕೇಸರಿ, ಬಿಳಿ, ಹಸಿರು ಹಣ್ಣನ್ನು ತೆಗೆದುಕೊಂಡು ಆರ್ಡರ್‌ ಪ್ರಕಾರ ಜೋಡಿಸಿದರೆ ಮುಗಿಯಿತು. ಉದಾ: ಮೊದಲಿಗೆ ಕಿತ್ತಳೆ, ನಂತರ ಬಾಳೆಹಣ್ಣು, ಕೊನೆಗೆ ದ್ರಾಕ್ಷಿ, ಕಿವಿ ಹಣ್ಣು ಇತ್ಯಾದಿ.

Putti Prapancha: ಭಾರತದ ಸ್ವಾತಂತ್ರ್ಯೋತ್ಸವ - ಮಕ್ಕಳ ಚಟುವಟಿಕೆಗಳು !

ತ್ರಿವರ್ಣ ಸಿಹಿತಿನಿಸು: ಯಾವುದೇ ಸಂತಸದ ಸಂದರ್ಭ ಸಿಹಿಯಿಲ್ಲದೆ ಊಟ ಪರಿಪೂರ್ಣವಾಗುವುದಿಲ್ಲ. ಹಾಗಾಗಿ ತ್ರಿವರ್ಣದ ಮಿಲ್ಕ್‌ ಬರ್ಫಿ ಟ್ರೈ ಮಾಡಿ. ವಿಧಾನ ಸೇಮ್‌ ಆದರೆ, ಬಣ್ಣ ಮಾತ್ರ ಬದಲಾಗಬೇಕು.

ಟ್ರೈಕಲರ್ ಸ್ವೀಟ್ – ಮೂರು ಬಣ್ಣದ ಮಿಲ್ಕ್ ಬರ್ಫಿ ಮಾಡುವ ವಿಧಾನ – Public TV

ತ್ರಿವರ್ಣ ಪಾಸ್ತಾ: ಇಟಾಲಿಯನ್‌ ಪಾಕ ಪದ್ದತಿ ಇಷ್ಟ ಪಡುವವರು ಗಣರಾಜ್ಯೋತ್ಸವದ ಆಚರಣೆಯಲ್ಲಿ ನಿಮ್ಮ ಪಾಸ್ಟಾಗೆ ತ್ರಿವರ್ಣ ಟ್ವಿಸ್ಟ್ ನೀಡಿ. ಕ್ಯಾರೆಟ್, ಕೋಸುಗಡ್ಡೆ ಮತ್ತು ಬಿಳಿ ಪಾಸ್ಟಾದಂತಹ ತರಕಾರಿಗಳನ್ನು ಬಳಸಿಕೊಂಡು ನಿಮ್ಮ ತ್ರಿವರ್ಣ ತಿಂಡಿಯನ್ನು ನೀವು ತ್ವರಿತವಾಗಿ ತಯಾರಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!