ಗಣರಾಜ್ಯೋತ್ಸವ: 901 ಪೊಲೀಸರಿಗೆ ‘ಪೊಲೀಸ್ ಪ್ರಶಸ್ತಿ’ ಘೋಷಣೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಣರಾಜ್ಯೋತ್ಸವದ ಸಂದರ್ಭದಲ್ಲಿ ಕೊಡಮಾಡುವ ಪೊಲೀಸ್ ಪದಕವನ್ನು ಘೋಷಿಸಲಾಗಿದೆ.
ಒಟ್ಟು 901 ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಪದಕಗಳನ್ನ (PMG) ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ. ಈ ಪೈಕಿ 140 ಪೊಲೀಸ್ ಸಿಬ್ಬಂದಿಗೆ ಶೌರ್ಯಕ್ಕಾಗಿ ಪೊಲೀಸ್ ಪದಕ (PMG), 93 ಪೊಲೀಸರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕ (PPM) ಮತ್ತು ಪೊಲೀಸ್ ಪದಕವನ್ನು ನೀಡಲಾಗುವುದು.668 ಪೊಲೀಸ್ ಸಿಬ್ಬಂದಿಯನ್ನ ವಿಶಿಷ್ಟ ಸೇವೆಗಾಗಿ (PM) ಗೌರವಿಸಲಾಗುವುದು.
140 ಶೌರ್ಯ ಪ್ರಶಸ್ತಿಗಳಲ್ಲಿ ಉಗ್ರಗಾಮಿ ಪೀಡಿತ ಪ್ರದೇಶಗಳ ಗರಿಷ್ಠ 80 ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶದ 45 ಪೊಲೀಸರನ್ನು ಗೌರವಿಸಲಾಗುತ್ತಿದೆ.ಇದ್ರಲ್ಲಿ 48 ಸಿಆರ್ಪಿಎ ಜವಾನರಿದ್ದಾರೆ. ಮಹಾರಾಷ್ಟ್ರದಿಂದ 31, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಂದ 25, ಜಾರ್ಖಂಡ್ ಪೊಲೀಸರಿಂದ 9, ದೆಹಲಿ ಪೊಲೀಸರಿಂದ 7 ಮತ್ತು ಉಳಿದವರು ಛತ್ತೀಸ್ಗಢ ಮತ್ತು ಬಿಎಸ್‌ಎಫ್ನಿಂದ, ಹಾಗೆಯೇ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಿಎಪಿಎಫ್ ಸಿಬ್ಬಂದಿಗಳಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!