Monday, July 4, 2022

Latest Posts

ಅದ್ಧೂರಿ ಗಣರಾಜ್ಯೋತ್ಸವ 2022: ಸಮವಸ್ತ್ರದಲ್ಲಿ ಪರೇಡ್‌ ಪೂರ್ವಾಭ್ಯಾಸ ನಡೆಸುತ್ತಿರುವ ಸೇನಾ ಪಡೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವದ ಆಚರಣೆ ಆರಂಭಗೊಂಡಿದೆ. ಸೇನಾ ಪಡೆಗಳು ಪೂರ್ಣಸಮವಸ್ತ್ರದಲ್ಲಿ ಇಂದು ಪರೇಡ್‌ ರಿಹರ್ಸಲ್‌ ನಡೆಸುತ್ತಿವೆ.
ಪೂರ್ವಾಭ್ಯಾಸವು ವಿಜಯ್‌ ಚೌಕ್‌ ನಿಂದ ಪ್ರಾರಂಭವಾಗಿ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗಲಿದೆ. ಈ ವೇಳೆ ಪರೇಡ್‌ ನಲ್ಲಿ ಭಾಗವಹಿಸುವವರು ಸಮವಸ್ತ್ರದಲ್ಲಿ ಹಾಜರಿದ್ದಾರೆ. ಪರೇಡ್‌ ನಡೆಯುವ ಮಾರ್ಗದಲ್ಲಿ ದೆಹಲಿ ಪೊಲೀಸರು ಕೂಡ ಟ್ರಾಫಿಕ್‌ ನಿಯಂತ್ರಿಸಿ, ಸಂಚಾರದ ಸಲಹೆ ನೀಡುತ್ತಿದ್ದಾರೆ. ಪೊಲೀಸರಿಗೆ ಟ್ರಾಫಿಕ್‌ ವ್ಯವಸ್ಥೆ ಸುಗಮವಾಗಲು ಪಾಯಿಂಟ್‌ ಬೈ ಪಾಯಿಂಟ್‌ ಮಾರ್ಗಸೂಚಿ ಹೊರಡಿಸಿದ್ದಾರೆ. ಈ ವೇಳೆ ಬಸ್‌ ಹಾಗೂ ಇತರ ವಾಹನಗಳ ಸಂಚಾರಕ್ಕೂ ವ್ಯವಸ್ಥೆ ಮಾಡಲಾಗುತ್ತಿದೆ.
ಮೆರವಣಿಗೆಗೆ ಅನುಕೂಲವಾಗುವಂತೆ ರಾಜಧಾನಿಯ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿದೆ. ಇಂದು ಸಂಜೆ ಪರೇಡ್‌ ಮುಗಿರುವವರೆಗೆ ವಿಜಯ್‌ ಚೌಕ್‌ ನಿಂದ ಇಂಡಿಯಾ ಗೇಟ್‌ ವರೆಗೆ ಯಾವುದೇ ವಾಹನ ಸಂಚರಿಸುವುದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss