ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಸಿಕ್ತು ಅವಕಾಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪೆರೇಡ್‌
ನಲ್ಲಿ ಭಾಗವಹಿಸಲು ಕರ್ನಾಟಕ ಸ್ತಬ್ಧಚಿತ್ರಕ್ಕೆ ಕೊನೆಗೂ ಅವಕಾಶ ದೊರೆತಿದೆ.

ರಾಜ್ಯವು ಪ್ರತಿನಿಧಿಸಿದ್ದ ಮಹಿಳಾ ಸಬಲೀಕರಣ ವಿಷಯಾಧರಿತ ಸ್ತಬ್ಧಚಿತ್ರ ಆರಂಭದ ಕೆಲವು ಸುತ್ತಿನಲ್ಲಿ ಆಯ್ಕೆಯಾಗಿತ್ತು. ಸ್ತಬ್ಧಚಿತ್ರದ ವಿನ್ಯಾಸ ಮತ್ತು ಸಂಗೀತಕ್ಕೆ ತಜ್ಞರ ಸಮಿತಿ ಒಪ್ಪಿಗೆ ಸಹ ನೀಡಿತ್ತು.

ಆದರೆ ಇತರೆ ರಾಜ್ಯಗಳಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಕೊನೆಯ ಹಂತದಲ್ಲಿ ಅವಕಾಶ ನಿರಾಕರಿಸಲಾಗಿತ್ತು. ಈ ಕುರಿತು ಎಲ್ಲೆಡೆ ಮಾತು ಕೇಳಿಬಂದಿತ್ತು. ಈ ಬೆನ್ನಲ್ಲೆ ಇದೀಗ ಪೆರೇಡ್‌ ನಲ್ಲಿ ಭಾಗವಹಿಸಲು ಕರ್ನಾಟಕಕ್ಕೆ ಕೇಂದ್ರವು ಅಸ್ತು ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!