ಹೊಸದಿಗಂತ ಡಿಜಿಟಲ್ ಡೆಸ್ಕ್:
ಜ.23ರಿಂದ ಪ್ರಾರಂಭವಾಗುವ ಗಣರಾಜ್ಯೋತ್ಸವಕ್ಕೆ ರಾಜಧಾನಿ ದೆಹಲಿ ಸಜ್ಜಾಗುತ್ತಿದೆ. ಗಣರಾಜ್ಯೋತ್ಸವಕ್ಕೆ ಇನ್ನೂ ಒಂದು ವಾರ ಬಾಕಿ ಇರುವಂತೆಯೇ ದೆಹಲಿಯ ರಾಜಪಥ್ ನಲ್ಲಿ ಎಲ್ಲಾ ಕಾರ್ಯಕ್ರಮ, ಪರೇಡ್ ಗಳ ಪೂರ್ವಾಭ್ಯಾಸ ಆರಂಭಗೊಂಡಿದೆ.
ಪ್ರತಿ ವರ್ಷದಂತೆ ಈ ವರ್ಷವೂ ವಿಭಿನ್ನ ಕಾರ್ಯಕ್ರಮ ಹಾಗೂ ಸ್ತಬ್ಧಚಿತ್ರ ಮೆರವಣಿಗೆ ನಡೆಯಲಿದೆ.
ಗಣರಾಜ್ಯೋತ್ಸವದಲ್ಲಿ ನಡೆಯುವ ಪರೇಡ್ ಇಡೀ ಕಾರ್ಯಕ್ರಮದ ಕೇಂದ್ರಬಿಂದುವಾಗಿರಲಿದೆ. ಮೆರವಣಿಗೆಗಳು ರಾಷ್ಟ್ರಪತಿ ಭವನದಿಂದ ರಾಜ್ ಪಥ್ ಗೆ ಹಾಗೂ ಇಂಡಿಯಾ ಗೇಟ್ ನಿಂದ ಕೆಂಪುಕೋಟೆಗೆ ಮೆರವಣಿಗೆ ಸಾಗಲಿದೆ.
ಮೂರು ಸೇನಾ ಪಡೆಗಳ ವತಿಯಿಂದ ರಫೇಲ್, ಮಿಗ್ 29ಕೆ ಮತ್ತು ಪಿ-81, ಜಾಗ್ವಾರ್ ಫೈಟರ್ ಜಟ್ ಕೂಡ ತಮ್ಮ ಸಾಮರ್ಥ್ಯ ಪ್ರದರ್ಶಿಸಲಿವೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ರಾಜಪಥ್ ಅದ್ದೂರಿಯಾಗಿ ಸಜ್ಜಾಗುತ್ತಿದೆ. ಬೆಳಗ್ಗೆಯೇ ಸೇನಾಪಡೆಯ ಯೋಧರು ಪರೇಟ್ ಪೂರ್ವತಯಾರಿಯಲ್ಲಿ ತೊಡಗಿಸಿಕೊಂಡಿರುವ ದೃಶ್ಯಗಳಿವು..
#WATCH | Rehearsals of Republic Day Parade underway at Rajpath, New Delhi pic.twitter.com/vhWLfZrNbv
— ANI (@ANI) January 18, 2022