Monday, October 2, 2023

Latest Posts

18 ವರ್ಷದ ದಾಂಪತ್ಯ ಅಂತ್ಯಗೊಳಿಸಿದ ಧನುಷ್-ಐಶ್ವರ್ಯಾ ರಜನಿಕಾಂತ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ತಮ್ಮ 18 ವರ್ಷದ ದಾಂಪತ್ಯಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ಇಬ್ಬರೂ ದೀರ್ಘಕಾಲದ ಯೋಚನೆ ನಂತರ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಇಬ್ಬರ ಹಾದಿಗಳೂ ಇದೀಗ ಮೊದಲಿನಂತಿಲ್ಲ, ಎರಡೂ ದಾರಿ ಬೇರೆಯೇ ಇದೆ. ಪರಸ್ಪರ ಮಾತನಾಡಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದಿದ್ದಾರೆ.

18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಜತೆಗೆ ಇದ್ದೇವೆ. ಈ ಹಾದಿಯಲ್ಲಿ ಇಬ್ಬರೂ ಬೆಳವಣಿಗೆ ಕಂಡಿದ್ದೇವೆ. ಒಟ್ಟಿಗೇ ನಕ್ಕಿದ್ದೇವೆ, ಅತ್ತಿದ್ದೇವೆ, ಅರ್ಥಮಾಡಿಕೊಂಡಿದ್ದೇವೆ, ಹೊಂದಾಣಿಕೆ ಏನೆಂದು ತಿಳಿದಿದ್ದೇವೆ. ಆದರೆ ಇದೀಗ ಇಬ್ಬರ ದಾರಿಯೂ ಬೇರೆ ಬೇರೆಯಾಗಿದೆ. ನಾನು ಐಶ್ವರ್ಯ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ನಿರ್ಧಾರಕ್ಕೆ ಬಂದಿದ್ದೇವೆ. ಎಂದು ಹೇಳಿದ್ದಾರೆ. ಜೊತೆಗೆ ನಮ್ಮ ಖಾಸಗಿತನವನ್ನು ದಯವಿಟ್ಟು ಗೌರವಿಸಿ ಎಂದಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!