ಗಣರಾಜ್ಯೋತ್ಸವದ ಪರೇಡ್: ಕರ್ನಾಟಕದ ಟ್ಯಾಬ್ಲೋಗೆ ಎರಡನೇ ಸ್ಥಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗಣರಾಜ್ಯೋತ್ಸವದಲ್ಲಿ ನಡೆದ ಪರೇಡ್​​ನಲ್ಲಿ ಭಾಗಿಯಾಗಿದ್ದ ಸ್ತಬ್ಧಚಿತ್ರಗಳ ಪೈಕಿ ಕರ್ನಾಟಕದ ಟ್ಯಾಬ್ಲೋಗೆ ಎರಡನೇ ಸ್ಥಾನ ಸಿಕ್ಕಿದೆ.
ಈ ಕುರಿತು ಘೋಷಣೆ ಮಾಡಿದ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ತಜ್ಞರ ಸಮಿತಿ, ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಕಾರಿಡಾರ್​ ಕುರಿತು ನಿರ್ಮಾಣಗೊಂಡಿದ್ದ ಸ್ತಬ್ಧಚಿತ್ರಕ್ಕೆ ಮೊದಲ ಸ್ಥಾನ ಸಿಕ್ಕಿದ್ದು,ಕಿ ಕರ್ನಾಟಕದ ಟ್ಯಾಬ್ಲೋಗೆ ಎರಡನೇ ಸ್ಥಾನ , ಮೇಘಾಲಯದ ಮಹಿಳೆಯರ ಸಹಕಾರ ಸಂಘ ಹಾಗೂ ರಾಜ್ಯದ ಸುವರ್ಣ ಮಹೋತ್ಸವ ಸಂಭ್ರಮ ಬಿಂಬಿಸುವ ಸ್ತಬ್ಧಚಿತ್ರಕ್ಕೆ ಮೂರನೇ ಸ್ಥಾನ ಸಿಕ್ಕಿದೆ.
ಈ ಬಾರಿ ಪರೇಡ್​​ನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಸ್ತಬ್ಧಚಿತ್ರ ಸೇರಿದಂತೆ 12 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರ ಭಾಗಿಯಾಗಿದ್ದವು.
ಕರ್ನಾಟಕದಿಂದ ಕರಕುಶಲ ಕಲೆಯ ವೈಭವ ಸಾರುವ ಸ್ತಬ್ಧಚಿತ್ರ ನಿರ್ಮಾಣ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಂದೇ ಭಾರತಮ್​ ನೃತ್ಯ ತಂಡಕ್ಕೆ ಬಹುಮಾನ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಕೆಲ ನೃತ್ಯಗಾರರು ಭಾಗಿಯಾಗಿದ್ದರು.
ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದು, ಗಣರಾಜ್ಯೋತ್ಸವ ಪರೇಡ್ 2022ರಲ್ಲಿ ‘ಸಾಂಪ್ರದಾಯಿಕ ಕರಕುಶಲ ವಸ್ತುಗಳ ತೊಟ್ಟಿಲು’ ಎಂಬ ಕರ್ನಾಟಕದ ಟ್ಯಾಬ್ಲೋ 2ನೇ ಸ್ಥಾನವನ್ನು ಗೆದ್ದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!