ಇರಾನ್ ವಶದಲ್ಲಿದ್ದ ಹಡಗಿನಿಂದ ಭಾರತೀಯ ಮಹಿಳೆಯ ರಕ್ಷಣೆ: ಸುರಕ್ಷಿತವಾಗಿ ತವರಿಗೆ ವಾಪಾಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 
 
ಇಸ್ರೇಲ್ ಮೇಲಿನ ದಾಳಿಗೂ ಮುನ್ನ ಇರಾನ್ ಇಸ್ರೇಲ್ ಮೂಲದ ಹಡಗಿನ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿತ್ತು. ಈ ಹಡಗಿನಲ್ಲಿ 17 ಭಾರತೀಯ ಸಿಬ್ಬಂದಿಗಳು ಸಿಲುಕಿದ್ದರು.

ಈ ಸುದ್ದಿ ಅರಿತ ಬೆನ್ನಲ್ಲೇ ತಕ್ಷಣವೇ ಕಾರ್ಯಪ್ರವೃತ್ತರಾದ ಭಾರತ, ರಾಜತಾಂತ್ರಿಕ ಮಾತುಕತೆ ನಡೆಸಿ ಹಡಗಿನಲ್ಲಿದ್ದ ಭಾರತೀಯ ಮಹಿಳಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ತವರಿಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾಗಿದೆ.

ಈ ರೀತಿ ಕೇರಳದ ತ್ರಿಶೂರು ಮೂಲದ ಆ್ಯನ್ ತೀಸಾ ಜೊಸೆಫ್ ಮನೆಗೆ ಮರಳಿದ್ದಾರೆ. ಕುಟುಂಬದ ಸಂತಸ ಇಮ್ಮಡಿಗೊಂಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡ ಭಾರತೀಯ ವಿದೇಶಾಂಗ ಇಲಾಖೆ, ಇರಾನ್ ವಶಪಡಿಸಿದ ಸರಕು ಹಡಗಿನಲ್ಲಿದ್ದ ಮಹಿಳಾ ಸಿಬ್ಬಂದಿ ಆ್ಯನ್ ತೀಸಾ ಜೊಸೆಫ್ ಸುರಕ್ಷಿತವಾಗಿ ಮನಗೆ ಮರಳಿದ್ದಾರೆ. ಇರಾನ್ ಆಧಿಕಾರಿಗಳಿಗೆ ಧನ್ಯವಾದ. ಇನ್ನುಳಿದ ಭಾರತೀಯರ ಬಿಡುಗಡೆಗೆ ಇರಾನ್ ಅಧಿಕಾರಿಗಳ ಜೊತೆ ನಿರಂತರ ಮಾತುಕತೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿದೆ.

ತೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು, ಇರಾನ್ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಭಾರತ ವಿದೇಶಾಂಗ ಇಲಾಖೆ ಭಾರತೀಯರ ಸುರಕ್ಷಿತ ಬಿಡುಗಡೆ ಒತ್ತಾಯಿಸಿತ್ತು. ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿತ್ತು. ಇದರ ಪರಿಣಾಮ ಭಾರತೀಯ ಮಹಿಳಾ ಸಿಬ್ಬಂದಿಯನ್ನು ಇರಾನ್ ಸುರಕ್ಷಿತವಾಗಿ ಕಳುಹಿಸಿಕೊಟ್ಟಿದೆ.

ಇರಾನ್ ವಶಪಡಿಸಿದ ಹಡಗಿನಲ್ಲಿದ್ದ ಸಿಬ್ಬಂದಿಗಳ ಪೈಕಿ 17 ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಪೈಕಿ ಮಹಿಳಾ ಸಿಬ್ಬಂದಿ ಆ್ಯನ್ ತೀಸಾ ಜೊಸೆಫ್ ಭಾರತಕ್ಕೆ ಮರಳಿದ್ದಾರೆ. ಇನ್ನುಳಿದ 16 ಸಿಬ್ಬಂದಿಗಳನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರಲಾವುವುದು ಎಂದು ವಿದೇಶಾಂಗ ಇಲಾಖೆ ಹೇಳಿದೆ. ಭಾರತೀಯ ಸಿಬ್ಬಂದಿಗಳ ಭೇಟಿಗೆ ಇತ್ತೀಚೆಗೆ ಇರಾನ್ ಅವಕಾಶ ನೀಡಿತ್ತು. ಎಲ್ಲರನ್ನು ಭಾರತೀಯ ಅಧಿಕಾರಿಗಳು ಬೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಎಲ್ಲರು ಉತ್ತಮವಾಗಿದ್ದಾರೆ. ಶೀಘ್ರವೇ ತವರಿಗೆ ಮರಳಲಿದ್ದಾರೆ ಎಂದು ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಸ್ಥರಿಗೆ ಭಾರತೀಯ ವಿದೇಶಾಂಗ ಇಲಾಖೆ ಹೇಳಿದೆ.

ಏಪ್ರಿಲ್ 13 ರಂದು ಎಂಎಸ್‌ಸಿ ಅರೀಸ್‌ ಸರಕು ಹಡಗನ್ನು ಇರಾನ್ ಸೇನೆ ದಾಳಿ ನಡೆಸಿ ವಶಕ್ಕೆ ಪಡೆದಿತ್ತು. ಇಸ್ರೇಲ್‌ ಮೇಲಿನ ದಾಳಿಗೂ ಮುನ್ನ 3 ದಿನದ ಹಿಂದೆ ಹಡಗನ್ನು ಇರಾನ್‌ ವಶಪಡಿಸಿಕೊಂಡಿತ್ತು. ಇದರಲ್ಲಿನ 25 ಸಿಬ್ಬಂದಿ ಪೈಕಿ 17 ಭಾರತೀಯರ ಬಿಡುಗಡೆಗೆ ಭಾರತ-ಇರಾನ್ ಜೊತೆ ಮಾತುಕತೆ ನಡೆಸಿತ್ತು. .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!