ಗೆಲುವಿನ ಹಾದಿಗೆ ಮರಳುವ ನೀರಿಕ್ಷೆ: ಮುಂಬೈ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್‌ ಮುಖಾಮುಖಿಯಾಗಿದ್ದು ಟಾಸ್ ಗೆದ್ದಿರುವ ಪಂಜಾಬ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ರೀಲೆ ಬದಲು ಜಾನಿ ತಂಡ ಸೇರಿಕೊಂಡಿದ್ದಾರೆ. ಇತ್ತ ಶಿಖರ್ ಧವನ್ ಇಂಜುರಿಯಿಂದ ಚೇತರಿಸಿಕೊಂಡಿಲ್ಲ.

ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗೆಲುವಿಗಾಗಿ ಪ್ರಯಾಸ ಪಡುತ್ತಿದೆ. ಈಗಾಗಲೇ ಆಡಿರುವ 6 ಪಂದ್ಯದಲ್ಲಿ ಕೇವಲ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕಿಂಗ್ಸ್ ಕೂಡ 6ರಲ್ಲಿ 2 ಗೆಲುವು ಕಂಡಿದೆ. ಆದರೆ ನೆಟ್‌ರನ್‌ರೇಟ್ ಆಧಾರದಲ್ಲಿ 8ನೇ ಸ್ಥಾನದಲ್ಲಿದೆ.

ಎರಡೂ ತಂಡ ಇನ್ನುಳಿದ ಪಂದ್ಯ ಗೆದ್ದು ಪ್ಲೇ ಆಫ್ ಸ್ಥಾನಕ್ಕೇರುವ ಅವಕಾಶವಿದೆ. ಈ ಕಾರಣದಿಂದ ಇಂದಿನ ಪಂದ್ಯ ರೋಚಕತೆ ಪಡೆದುಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!