Friday, December 8, 2023

Latest Posts

ಮುರ್ಡೇಶ್ವರ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಪ್ರವಾಸಿಗರ ರಕ್ಷಣೆ

ಹೊಸದಿಗಂತ ವರದಿ, ಭಟ್ಕಳ:

ಮುರ್ಡೇಶ್ವರ ಸಮುದ್ರದಲ್ಲಿ ಈಜಲು ತೆರಳಿ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಶುಕ್ರವಾರ ಲೈಫ್‌ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ.

ಹಾವೇರಿ ಜಿಲ್ಲೆಯ ಹಂಸನಬಾವಿ ಗ್ರಾಮದ ಸಿದ್ಧಾರ್ಥ (೨೪), ದೀಕ್ಷಿತ್ (೨೦) ಹಾಗೂ ಸಂತೋಷ (೨೪) ಲೈಫ್‌ಗಾರ್ಡ್‌ಗಳಿಂದ ರಕ್ಷಣೆಗೊಳಗಾದ ಪ್ರವಾಸಿಗರು. ಹಾವೇರಿ ಜಿಲ್ಲೆಯಿಂದ ಆಗಮಿಸಿದ್ದ ೫ ಮಂದಿ ಯುವಕರ ತಂಡ ಧರ್ಮಸ್ಥಳ ಪ್ರಯಾಣ ಮುಗಿಸಿ ಶುಕ್ರವಾರ ಮುರ್ಡೇಶ್ವರಕ್ಕೆ ಆಗಮಿಸಿದ್ದರು.

ಮುರ್ಡೇಶ್ವರ ಸಮುದ್ರದಲ್ಲಿ ಈಜಲು ಇಳಿದ ಸಂದರ್ಭದಲ್ಲಿ ಅಲೆಗಳ ಆರ್ಭಟಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದರು. ಆ ಸಂದರ್ಭದಲ್ಲಿ ಲೈಫ್‌ಗಾರ್ಡ್ ಸಿಬ್ಬಂದಿ ಚಂದ್ರಶೇಖರ ದೇವಾಡಿಗ, ಜಯರಾಮ ಹಾಗೂ ಪಾಂಡು ರಕ್ಷಣೆ ಮಾಡಿ ತೀರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!