ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅನುಮತಿ ಇಲ್ಲ: ರವಿಶಂಕರ್ ಪ್ರಸಾದ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಸಂವಿಧಾನದಲ್ಲಿ ಧರ್ಮ ಆಧಾರಿತ ಮೀಸಲಾತಿಗೆ ಅನುಮತಿ ಇಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನೀಡಿರುವ ‘ಸಂವಿಧಾನ ಬದಲಾಯಿಸುತ್ತೇವೆ’ಎಂಬ ಹೇಳಿಕೆ ಖಂಡಿಸಿದರು.

ಓಲೈಕೆ ರಾಜಕೀಯವನ್ನು ಅಭ್ಯಾಸ ಮಾಡುವುದರಿಂದ ಉಂಟಾಗುವ ಹಾನಿಕಾರಕ ಪರಿಣಾಮಗಳ ಬಗ್ಗೆ ವಿರೋಧ ಪಕ್ಷಗಳಿಗೆ ನೆನಪಿಸಲು ಪ್ರಯತ್ನಿಸಿದರು.ಬಿಜೆಪಿ ತಂದಿರುವ ಸಕಾರಾತ್ಮಕ, ಸಮಗ್ರ ಮತ್ತು ಬೆಳವಣಿಗೆ ಆಧಾರಿತ ನೀತಿಗಳನ್ನು ಸರಿದೂಗಿಸುವ ಸಾಮರ್ಥ್ಯವನ್ನು ಮತ-ಬ್ಯಾಂಕ್ ರಾಜಕೀಯವು ಹೊಂದಿದೆಯೇ ಎಂದು ಪ್ರಶ್ನಿಸಿದರು.

ಶಾ ಬಾನೋ ಪ್ರಕರಣ ಮತ್ತು ತ್ರಿವಳಿ ತಲಾಖ್ ಕಾನೂನಿನ ವಿರುದ್ಧದ ತೀವ್ರ ವಿರೋಧದಂತಹ ನಿದರ್ಶನಗಳನ್ನು ಪ್ರಸಾದ್ ಸ್ಪಷ್ಟವಾಗಿ ಉಲ್ಲೇಖಿಸಿದರು.

ಕಾಂಗ್ರೆಸ್​ನ ಹಿರಿಯ ನಾಯಕಿ ಸೋನಿಯಾಗಾಂಧಿ ಕೂಡ ಮಹಿಳೆ, ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ ಕೂಡ ಮಹಿಳೆ ಆದರೂ ತ್ರಿವಳಿ ತಲಾಖೆ ನಿಷೇಧಿಸುವ ಸಮಯದಲ್ಲಿ ಕೇವಲ ಮತಗಳಿಗಾಗಿ ಅವರು ವಿರೋಧ ವ್ಯಕ್ತಪಡಿಸಿದ್ದರು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!