October 28, 2026
Wednesday, October 28, 2026
spot_img

ಪರಿಷತ್ ಚುನಾವಣೆಯಲ್ಲಿ ಎನ್‌ಡಿಎಗೆ ಭರ್ಜರಿ ಜಯ: ಸಿಎಂ ಡಿಕೆಶಿ ಕಾಲೆಳೆದ ಬಿಜೆಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಧಾನ ಪರಿಷತ್ತಿನ 2 ಪದವೀಧರ ಮತ್ತು 2 ಶಿಕ್ಷಕರ ಕ್ಷೇತ್ರ ಸೇರಿ ಒಟ್ಟು 4 ಕ್ಷೇತ್ರಗಳ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ ಹಾಗೂ ಜನತಾ ದಳ (ಜಾತ್ಯತೀತ) ಒಳಗೊಂಡ ಎನ್‌ಡಿಎ 4-0 ಅಂತರದ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಬಗ್ಗೆ ಬಿಜೆಪಿ ಟ್ವೀಟ್‌ ಮಾಡಿದ್ದು, ಸಿಎಂ ಡಿ.ಕೆ. ಶಿವಕುಮಾರ್‌ ಅವರ ಕಾಲೆಳೆದಿದೆ.

ಕಾಕ್ರೋಚ್ ಜನತಾ ಪಾರ್ಟಿಗೆ ಸಂಬಂಧಿಸಿದ ಯುವಜನ ಮತ್ತು ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಅವರು ʼಸೋನಮ್‌ ಇಟ್ಸ್‌ ಡನ್‌ ಬ್ರೋʼ ಎಂದು ಪೋಸ್ಟ್‌ ಮಾಡಿದ್ದರು. ಅದೇ ರೀತಿಯಲ್ಲಿ ಇದೀಗ ಬಿಜೆಪಿ ಕೂಡ, ʼಡಿಕೆ, ಇಟ್ಸ್‌ ಡನ್‌ ಬ್ರೋʼ ಎಂದು ಟ್ವೀಟ್‌ ಮಾಡಿ ಅಣಕಿಸಿದೆ.

ಎಂಎಲ್‌ಸಿ ಚುನಾವಣೆಯಲ್ಲಿನ ನಾಲ್ಕೂ ಸ್ಥಾನಗಳಲ್ಲಿ ಹೀನಾಯ ಸೋಲು ಕಂಡ ಆಡಳಿತಾರೂಢ ಕಾಂಗ್ರೆಸ್ ಅನ್ನು ಲೇವಡಿ ಮಾಡಲು ಬಿಜೆಪಿ ಇತ್ತೀಚೆಗೆ ಬಂದ ಟ್ರೆಂಡ್‌ನ್ನು ಬಳಕೆ ಮಾಡಿದ್ದು, ಎಂಎಲ್‌ಸಿ ಚುನಾವಣೆಯಲ್ಲಿ ಶಿಕ್ಷಕರ ಮತ್ತು ಪದವೀಧರರ ನಾಲ್ಕೂ ಕ್ಷೇತ್ರಗಳನ್ನು ಎನ್‌ಡಿಎ ಗೆದ್ದುಕೊಂಡಿದೆ ಎಂದು ಟ್ವೀಟ್‌ ಮಾಡಿದೆ.

Must Read