ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಉಂಟಾದ ತೈಲ ಸಮಸ್ಯೆಗಳು ಸರಿಯಾಗುವ ವರೆಗೆ ಇಂಧನಗಳ ಮಿತ ಬಳಕೆ, ಸರ್ಕಾರಿ ಸಾರಿಗೆಯನ್ನು ಬಳಸಲು ಪ್ರಧಾನಿ ಮೋದಿ ಅವರು ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ.
ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಧೀಶರು ಕೂಡ ಪ್ರಧಾನಿ ಮೋದಿಯ ಮನವಿಗೆ ಸ್ಪಂದಿಸಿದ್ದು, ನ್ಯಾಯಾಲಯಕ್ಕೆ ಕಾರಿನಲ್ಲಿ ಬರುವ ಬದಲು ಇಂದು ಸೈಕಲ್ ಮೂಲಕ ಆಗಮಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾ. ದ್ವಾರಕಾ ಧೀಶ್ ಬನ್ಸಾಲ್ ಅವರು ಇಂದು ಸೈಕಲ್ ಮೂಲಕ ಕೋರ್ಟ್ ಗೆ ಆಗಮಿಸಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ಕೂಡ ಸೈಕಲ್ನಲ್ಲಿಯೇ ಜೊತೆಗೆ ಆಗಮಿಸಿದರು. ನ್ಯಾಯಾಧೀಶರ ಈ ನಡೆ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಈ ಬಗ್ಗೆ ವಿಡಿಯೋ ಹಂಚಿಕೊಂಡ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯ ಮನವಿಯನ್ನು ನಾನು ಗಮನಿಸಿದೆ. ಹೀಗಾಗಿ ಹೈಕೋರ್ಟ್‌ಗೆ ಸೈಕಲ್‌ನಲ್ಲಿ ಪ್ರಯಾಣಿಸುವ ಮೂಲಕ ಸಾಮಾನ್ಯ ಜನರಿಗೂ ಕೂಡ ಕಡಿಮೆ ದೂರಕ್ಕೆ ಪ್ರಯಾಣಿಸಲು ಸೈಕಲ್ ಬಳಸುವ ಸಂದೇಶ ನೀಡಲು ಬಯಸಿದೆ ಎಂದು ತಿಳಿಸಿದರು.



