ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್ ಉಗ್ರರು ಅಲ್ ಖೈದಾಗಿಂತ ಕ್ರೂರಿಗಳು. ಒತ್ತೆಸೆರೆಯಲ್ಲಿರುವ ತಮ್ಮವರನ್ನು ಮರಳಿ ಕರೆ ತರುವವರೆಗೂ ನಾವು ವಿಶ್ರಮಿಸಲ್ಲ ಎಂದು ಅಮೆರಿಕ ಗುಡುಗಿದೆ.
ಇಸ್ರೆಲ್ ಮೇಲೆ ದಾಳಿ ನಡೆಸುವ ಮೂಲಕ ಸಾವಿರಾರು ಅಮಾಯಕನ್ನು ಹೀನಾಯವಾಗಿ ಕೊಂದು ಉಗ್ರರು ತಮ್ಮ ಕ್ರೂರತೆ ಮೆರೆದಿದ್ದಾರೆ.ಇಸ್ರೇಲ್ ಬೆಂಬಲಿಸುವ ಮೂಲಕ ಅಮೆರಿಕ ಯಾವುದೇ ತಪ್ಪು ಮಾಡಿಲ್ಲ.
ಅಮೆರಿಕ ಇಸ್ರೇಲ್ ಜತೆ ನಿಲ್ಲಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸ್ಪಷ್ಟೋಕ್ತಿಯಲ್ಲಿ ತಿಳಿಸಿದ್ದಾರೆ.
ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ಇಸ್ರೇಲ್‌ನಲ್ಲಿದ್ದಾರೆ. ದಾಳಿಯಿಂದ ರಕ್ಷಣೆ ಪಡೆದುಕೊಳ್ಳಲು ಹಾಗೂ ಉಗ್ರರಿಗೆ ಪ್ರತ್ಯುತ್ತರ ನೀಡಲು ಇಸ್ರೇಲ್‌ಗೆ ಅಗತ್ಯವಿರುವುದನ್ನು ಪೂರೈಸಲಿದ್ದೇವೆ. ಹಮಾಸ್ ಬಂಡುಕೋರರು ಒತ್ತೆಯಾಳಾಗಿರಿಸಿಕೊಂಡಿರುವ ಅಮೆರಿಕ ಪ್ರಜೆಗಳ ಬಿಡುಗಡೆಗೆ ನಾವು ಆಹೋ ರಾತ್ರಿ ಶ್ರಮಿಸುತ್ತಿದೆ. ಗಾಜಾದಲ್ಲಿ ಮಾನವೀಯ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವುದೂ ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.