Monday, October 2, 2023

Latest Posts

40 ವರ್ಷಗಳಿಂದ ಸಂಸ್ಥೆಗಾಗಿ ದುಡಿದಿದ್ದೇವೆ, ಫ್ರೀ ಪ್ರಯಾಣಕ್ಕೆ ಬೇಡಿಕೆ ಇಟ್ಟ ನಿವೃತ್ತ ನೌಕರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇದೇ ತಿಂಗಳ 11 ರಿಂದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಸರ್ಕಾರ ಅವಕಾಶ ನೀಡಿದೆ. ಮಹಿಳೆಯರಿಗೆ ಫ್ರೀ ಬಸ್ ಅವಕಾಶ ಹಿನ್ನೆಲೆಯಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನಿವೃತ್ತ ನೌಕರರು ನಮಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

ವಾರ್ಷಿಕವಾಗಿ ಪ್ರಯಾಣಕ್ಕೆಂದು 500 ರೂಪಾಯಿ ನೀಡುತ್ತೇವೆ. ಸಂಸ್ಥೆಯ ಏಳಿಗೆಗಾಗಿ 40 ವರ್ಷಗಳಿಂದ ದುಡಿದಿದ್ದೇವೆ. ಸಂಸ್ಥೆಗಾಗಿ ಸೇವೆ ಸಲ್ಲಿಸಿದವರಿಂದ ಹಣ ಪಡೆಯುವುದು ಸೂಕ್ತವಲ್ಲ. ನಿವೃತ್ತ ನೌಕರರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕೊಡಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಇಡೀ ರಾಜ್ಯದಲ್ಲಿ ಒಟ್ಟಾರೆ 10 ಸಾವಿರ ನಿವೃತ್ತ ನೌಕರರು ಇದ್ದಾರೆ. ಜೂ,11 ರ ವೇಳೆಗೆ ಮಹಿಳೆಯರ ಜೊತೆ ನಮಗೂ ಉಚಿತ ಬಸ್ ಪ್ರಯಾಣಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ಕೆಸ್‌ಆರ್‌ಟಿಸಿ ಸ್ಟಾಫ್ ಆಂಡ್ ವರ್ಕ್‌ರ್ಸ್ ಫೆಡರೇಷನ್‌ನಿಂದ ಮನವಿ ಪತ್ರ ಸಲ್ಲಿಸಿದ್ದು, ಸಿಎಂ ಸಿದ್ದರಾಮಯ್ಯ ನಿವೃತ್ತ ನೌಕರರಿಗೆ ಫ್ರೀ ಪ್ರಯಾಣ ಮಾಡೋಕೆ ಅವಕಾಶ ಕೊಡ್ತಾರಾ? ಕಾದುನೋಡಬೇಕಿದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!