Thursday, December 8, 2022

Latest Posts

ಅದಮಾರು ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಕೆ.ರಾಮದಾಸ ಆರ್ಯ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಉಡುಪಿ ಜಿಲ್ಲೆಯ ಪಡುಬಿದ್ರೆಯ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಕೆ.ರಾಮದಾಸ್ ಆರ್ಯ(71) ಹೃದಯಾಘಾತದಿಂದ ಬೆಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಬಯಾಲಜಿ ಉಪಾನ್ಯಾಸಕರಾಗಿದ್ದು, ಮೂಲತಃ ಕಾರ್ಕಳದವರಾಗಿದ್ದು, ಪ್ರಸ್ತುತ ಪಡುಬಿದ್ರಿ ರಾಮನಗರದ ಆರ್ಯವರ್ತ ನಿವಾಸಿಯಾಗಿದ್ದ ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
ಅದಮಾರು ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುದೀರ್ಘ 30 ವರ್ಷ ಸೇವೆ ಸಲ್ಲಿಸಿದ್ದ ಅವರು ಶಿಸ್ತಿನ ಸಿಪಾಯಿಯೆಂದು ಕರೆಸಿಕೊಂಡು ಪ್ರಿನ್ಸಿಪಾಲ್ ಆಗಿ ನಿವೃತ್ತರಾಗಿದ್ದರು. ಬಳಿಕ ಅವರು ಉಡುಪಿ ಪಿಪಿಸಿ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಜೇಸಿಐ ಪಡುಬಿದ್ರಿಯ ಮಾಜಿ ಅಧ್ಯಕ್ಷರಾಗಿದ್ದ ಅವರು ಜೇಸಿಐ ಇಂಡಿಯಾದ ಅತ್ಯುತ್ತಮ ರಾಷ್ಟ್ರೀಯ ತರಬೇತುದಾರರಾಗಿ  ಅಧ್ಯಕ್ಷೀಯ ಪದ್ಧತಿ ಮತ್ತು ಸಂಸದೀಯ ನಡಾವಳಿ  ತರಬೇತಿ ಮೂಲಕ ಹಲವು ಜನಪ್ರತಿನಿಧಿಗಳನ್ನು ಅತ್ಯುತ್ತಮ ಸಂಸದೀಯ ಪಟುವೆನಿಸಿಕೊಳ್ಳಲು ಕಾರಣೀಭೂತರಾಗಿದ್ದರು.
ಅದಮಾರು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಅದಮಾರು ಕಿರಿಯ ಮಠಾಽಶರಾದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು, ಅದಮಾರು ಹಿರಿಯ ಮಠಾಽಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಕಾರ್ಯದರ್ಶಿ ಶ್ರೀಧರ ಕೆ.ರಾವ್, ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಅಪಾರ ಸಂಖ್ಯೆಯ ವಿದ್ಯಾರ್ಥಿವೃಂದದವರು ಸಂತಾಪ ಸೂಚಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!