Monday, September 26, 2022

Latest Posts

ಬ್ರಿಟಿಷರು ದೋಚಿದ ವಜ್ರ, ಮುತ್ತು, ರತ್ನಗಳನ್ನೆಲ್ಲಾ ಆಯಾ ದೇಶಗಳಿಗೆ ಹಿಂದಿರುಗಿಸಿ, ಶುರುವಾಯ್ತು ಅಭಿಯಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟಿಷ್ ರಾಣಿ ತೊಡುತ್ತಿದ್ದ ಆಭರಣಗಳಲ್ಲಿದ್ದ ವಜ್ರ, ಮುತ್ತು, ರತ್ನ ಹಾಗೂ ಹವಳಗಳು ಬೇರೆ ಬೇರೆ ದೇಶಗಳಿಂದ ಕೊಳ್ಳೆ ಹೊಡೆದಿದ್ದು, ಇವುಗಳನ್ನು ಕೂಡಲೇ ಆಯಾ ದೇಶಗಳಿಗೆ ಹಿಂದಿರುಗಿಸಿ ಎನ್ನುವ ಅಭಿಯಾನ ಆರಂಭವಾಗಿದೆ.

ಇದೀಗ ದಕ್ಷಿಣ ಆಫ್ರಿಕಾ ತನ್ನ ಗ್ರೇಟ್ ಸ್ಟಾರ್ ಆಫ್ ಆಫ್ರಿಕಾ ವಾಪಾಸ್ ಮಾಡಿ ಎಂದು ಬ್ರಿಟನ್ ಅರಸೊತ್ತಿಗೆ ಮನವಿ ಮಾಡಿದೆ. ಫಳ ಫಳ ಹೊಳೆಯುವ ವಜ್ರ ಇದಾಗಿದ್ದು, ನಮ್ಮ ದೇಶಕ್ಕೆ ವಾಪಾಸ್ ಮಾಡಿ ಎಂದು ಸಾಮಾಜಿಕ ಹೋರಾಟಗಾರ ಥಂಡುಕ್ಸೊಲೊ ಸ್ಯಾಬೆಲೊ ಆಗ್ರಹಿಸಿದ್ದಾರೆ. ಈ ಬಗ್ಗೆ ಸಿಎನ್‌ಎನ್ ವರದಿ ಮಾಡಿದೆ.

ಬ್ರಿಟಿಷರ ಅಧೀಕನಲ್ಲಿದ್ದ ಪ್ರಾಂತ್ಯಗಳಲ್ಲಿದ್ದ ಜನ ವಜ್ರವನ್ನು ಬ್ರಿಟಿಷರ ಮನೆತನಕ್ಕೆ ಹಸ್ತಾಂತರಿಸಿದ್ದರು. ಆ ವಜ್ರ ರಾಣಿಯ ರಾಜದಂಡದಲ್ಲಿದೆ ಎನ್ನಲಾಗಿದೆ.

ಕಲ್ಲಿನನ್ ವಜ್ರವನ್ನು ದಕ್ಷಿಣ ಆಫ್ರಿಕಾಗೆ ವಾಪಾಸ್ ಮಾಡಲು ಸ್ಯಾಬಿಲೊ ಒಂದು ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಆರು ಸಾವಿರಕ್ಕೂ ಹೆಚ್ಚು ಮಂದಿ ಅದಕ್ಕೆ ಸಹಿ ಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!