Wednesday, September 28, 2022

Latest Posts

ರಾಣಿ ಎಲಿಜಬೆತ್ ಅಂತ್ಯಕ್ರಿಯೆ ಭಾಗವಾಗಿ ಲಂಡನ್‌ಗೆ ತೆರಳಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ದೆಹಲಿಗೆ ವಾಪಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬ್ರಿಟನ್‌ ರಾಣಿ ಎಲಿಜಬೆತ್‌ II ಅಂತ್ಯಕ್ರಿಯೆ ನಿಮಿತ್ತ ಲಂಡನ್‌ನಲ್ಲಿ ಮೂರು ದಿನ ಪ್ರವಾಸದಲ್ಲಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ದೆಹಲಿಗೆ ವಾಪಸಾಗಿದ್ದಾರೆ.

ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ಸಂಜೆ ಲಂಡನ್‌ ಗೆ ಆಗಮಿಸಿದ್ದರು. ನಿನ್ನೆ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಅಬೆಯಲ್ಲಿ ರಾಣಿ ಎಲಿಜಬೆತ್ II ರ ಅಂತ್ಯಕ್ರಿಯೆ ನಡೆಯಿತು. ಈ ವೇಳೆ ಜಾಗತಿಕ ನಾಯಕರೊಂದಿಗೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಭಾಗಿಯಾಗಿ ಮೌನಾಚರಣೆ ಮೂಲಕ ಬ್ರಿಟನ್‌ ರಾಣಿಗೆ ಅಂತಿಮ ವಿದಾಯ ಹೇಳಿದರು.

ಅಂತ್ಯಕ್ರಿಯೆ ಮುಗಿದ ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು ಲಂಡನ್‌ನಿಂದ ಹೊರಟು ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!