ಆರ್ಯನ್ ಖಾನ್ʼಗೆ ಪಾಸ್‌ಪೋರ್ಟ್‌ ಹಿಂತಿರುಗಿಸಿ: ಎನ್‌ಸಿಬಿಗೆ ಕೋರ್ಟ್ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಪಡೆದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ತಮ್ಮ ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ಎನ್‌ಸಿಬಿಗೆ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯ ಆದೇಶ ನೀಡಿದೆ.
ಬುಧವಾರ ವಿಶೇಷ ನ್ಯಾಯಾಲಯವು ಆರ್ಯನ್‌ ಖಾನ್‌ ಪಾಸ್‌ಪೋರ್ಟ್ ಹಿಂತಿರುಗಿಸುವಂತೆ ನ್ಯಾಯಾಲಯದ ನೋಂದಾವಣೆಗೆ ಸೂಚಿಸಿದೆ. ಆರ್ಯನ್ ಖಾನ್ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ನೀಡಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಆರ್ಯನ್ ಖಾನ್‌ನನ್ನ ಎನ್‌ಸಿಬಿ ಬಂಧಿಸಿತ್ತು. ಆದ್ರೆ, ತನಿಖಾ ಸಂಸ್ಥೆ ಪ್ರಕರಣದ ಆರೋಪಪಟ್ಟಿ ಸಲ್ಲಿಸಿದಾಗ ಅದರಲ್ಲಿ ಆರ್ಯನ್ ಖಾನ್ ಹೆಸರು ಇರಲಿಲ್ಲ.
ಹೀಗಾಗಿ ಸಾಕಷ್ಟು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಎನ್‌ಸಿಬಿ ಆರ್ಯನ್ ಮತ್ತು ಇತರ ಐವರನ್ನ ಬಿಡುಗಡೆ ಮಾಡಿದೆ.
ಜಾಮೀನಿನ ಷರತ್ತುಗಳ ಪ್ರಕಾರ ಆರ್ಯನ್ ಖಾನ್ ತನ್ನ ಪಾಸ್‌ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದೀಗ ಮತ್ತೆ ಪಾಸ್‌ಪೋರ್ಟ್ ಹಿಂದಿರುಗಿಸುವಂತೆ ಸೂಚಿಸಲಾಗಿದ್ದು ಇದರಿಂದ ಆರ್ಯನ್ ಖಾನ್ ವಿದೇಶ ಪ್ರವಾಸ ದಾರಿ ಸುಗಮವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!