ರಣವೀರ್‌ ನ್ಯೂಡ್‌ ಫೋಟೋ ಶೂಟ್‌ ಕುರಿತು ಆರ್‌ಜಿವಿ‌ ಪಾಸಿಟಿವ್ ಕಮೆಂಟ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗೆ ಬಾಲಿವುಡ್ ಸ್ಟಾರ್ ಹೀರೋ ರಣವೀರ್ ಸಿಂಗ್ ಅವರ ಬೆತ್ತಲೆ ಫೋಟೋ ಶೂಟ್ ವೈರಲ್ ಆಗಿರುವುದು ಗೊತ್ತೇ ಇದೆ. ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ ಇನ್ನೂ ಕೆಲವರು ಬೆಂಬಲಿಸಿದ್ದಾರೆ. ಎಲ್ಲಾ ವಿಚಾರದಲ್ಲೂ ತಲೆ ಹಾಕುವ ಆರ್‌ಜಿವಿ ಈ ವಿಚಾರದ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ.

ತಮ್ಮ ಟ್ವಿಟ್ಟರ್‌ನಲ್ಲಿ ರಣವೀರ್ ನಗ್ನ ಫೋಟೋವನ್ನು ಶೇರ್ ಮಾಡಿರುವ ರಾಮ್‌ ಗೋಪಾಲ್‌ ವರ್ಮಾ ”ಲಿಂಗ ಸಮಾನತೆಗೆ ನ್ಯಾಯ ಸಲ್ಲಿಸಲು ರಣವೀರ್ ಈ ಫೋಟೋಶೂಟ್ ಮಾಡಿದ್ದಾರೆ ಎಂದು ನನಗೆ ತಿಳಿದಿದೆ. ಮಹಿಳೆಯರು ಅರ್ಧಂಬರ್ಧ ಬಟ್ಟೆ ಧರಿಸಿ ಶೋ ಆಫ್‌ ಮಾಡಿದ್ರೆ ತಪ್ಪಿಲ್ಲ ಎಂದ ಮೇಲೆ ಪುರುಷರು ಆ ಕೆಲಸ ಮಾಡಿದ್ರೆ ತಪ್ಪಾ?. ಪುರುಷರಿಗೂ ಕೂಡ ಮಹಿಳೆಯರೊಂದಿಗೆ ಸಮಾನ ಹಕ್ಕುಗಳಿವೆ. ಆ ಹಕ್ಕುಗಳಿಗಾಗಿ ರಣವೀರ್ ಹೀಗೆ ಮಾಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!