August 19, 2026
Wednesday, August 19, 2026
spot_img

Rice series 98 | ಮನೆಯಲ್ಲೇ ಮಾಡಿ ಹೋಟೆಲ್ ಸ್ಟೈಲ್ ಮಸಾಲಾ ರೈಸ್!

ಬೆಳಿಗ್ಗೆ ಎದ್ದು ದಿನ ಶುರುವಾಗೋ ಮೊದಲು ಹೊಟ್ಟೆ ತುಂಬಿರೋದು ಎಷ್ಟು ಮುಖ್ಯ ಗೊತ್ತಾ? ಹೆವಿ ತಿಂಡಿ ಬೇಡ, ಆದರೆ ರುಚಿಯೂ ಇರಬೇಕು, ಎನರ್ಜಿ ಕೂಡ ಕೊಡಬೇಕು. ಅಂಥ ಬೆಳಿಗ್ಗೆಗಳಿಗೆ ಮಸಾಲಾ ರೈಸ್ ಒಂದು ಸ್ಮಾರ್ಟ್ ಆಯ್ಕೆ.
ನಿನ್ನೆ ಉಳಿದ ಅನ್ನ ಇದ್ದರೂ, ಇವತ್ತು ಹೊಸ ರುಚಿ ತಿನ್ನೋ feel ಕೊಡೋದು ಇದರ special.

ಬೇಕಾಗುವ ಸಾಮಗ್ರಿಗಳು

ಅನ್ನ – 2 ಕಪ್
ಈರುಳ್ಳಿ – 1
ಟೊಮೇಟೊ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಎಣ್ಣೆ – 2 ಟೇಬಲ್ ಸ್ಪೂನ್
ಜೀರಿಗೆ – 1 ಟೀ ಸ್ಪೂನ್
ಲವಂಗ – 2
ಏಲಕ್ಕಿ – 1
ದಾಲ್ಚಿನ್ನಿ – 1 ಸಣ್ಣ ತುಂಡು
ಅರಿಶಿನ ಪುಡಿ – ¼ ಟೀ ಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀ ಸ್ಪೂನ್
ಧನಿಯಾ ಪುಡಿ – 1 ಟೀ ಸ್ಪೂನ್
ಗರಂ ಮಸಾಲಾ – ½ ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಂತೆ
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ

ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ, ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ಸುಗಂಧ ಬರೋವರೆಗೆ ಹುರಿಯಿರಿ.
ಈಗ ಈರುಳ್ಳಿ ಸೇರಿಸಿ ಚಿನ್ನದ ಬಣ್ಣ ಬರೋವರೆಗೂ ಫ್ರೈ ಮಾಡಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸು ಸೇರಿಸಿ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ.
ಟೊಮೇಟೊ ಹಾಕಿ ಬೇಯಿಸಿ. ಜೊತೆಗೆ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.

ಇದಕ್ಕೆ ಅನ್ನ ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. ಅಕ್ಕಿ ಮುರಿಯದಂತೆ ಕಲಸಬೇಕು. ಕಡಿಮೆ ಬೆಂಕಿಯಲ್ಲಿ 2–3 ನಿಮಿಷ ಬಿಡಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !