July 16, 2026
Thursday, July 16, 2026
spot_img

ಗಂಭೀರ್-ಕೊಹ್ಲಿ ಮಧ್ಯೆ ಮತ್ತೆ ಮುನಿಸು? ಎಡ್ಜ್‌ಬಾಸ್ಟನ್ ನೆಟ್ಸ್‌ನಲ್ಲಿ ನಡೆದಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಒಳಗಿನ ಬೆಳವಣಿಗೆಗಳು ಸದ್ಯ ಅಭಿಮಾನಿಗಳಲ್ಲಿ ತಲ್ಲಣ ಮೂಡಿಸಿವೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾದ ಇತ್ತೀಚಿನ ತರಬೇತಿ ಶಿಬಿರವು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಹಿರಿಯ ಆಟಗಾರ ವಿರಾಟ್ ಕೊಹ್ಲಿ ನಡುವಿನ ಆಂತರಿಕ ಭಿನ್ನಾಭಿಪ್ರಾಯದ ವದಂತಿಗಳಿಗೆ ತುಪ್ಪ ಸುರಿದಿದೆ.

ನೆಟ್ಸ್‌ನಲ್ಲಿ ಕಂಡುಬಂದ ನಿರಾಸಕ್ತಿ

ಮೂಲಗಳ ಪ್ರಕಾರ, ಇಡೀ ಅಭ್ಯಾಸದ ಅವಧಿಯಲ್ಲಿ ಗಂಭೀರ್ ಹಾಗೂ ಕೊಹ್ಲಿ ಪರಸ್ಪರ ಮುಖಾಮುಖಿಯಾಗುವುದನ್ನು ತಡೆದಿದ್ದಾರೆ. ಕೋಚ್ ಗೌತಮ್ ಗಂಭೀರ್ ಅವರು ರೋಹಿತ್ ಶರ್ಮಾ, ಶುಭ್​ಮನ್ ಗಿಲ್ ಮತ್ತು ಕೆ.ಎಲ್. ರಾಹುಲ್ ಅವರೊಂದಿಗೆ ಸುದೀರ್ಘ ಕ್ರಿಕೆಟ್ ತಂತ್ರಗಳ ಬಗ್ಗೆ ಚರ್ಚೆಯಲ್ಲಿ ನಿರತರಾಗಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಕಂ ಬ್ಯಾಕ್ ಮಾಡಿರುವ ವಿರಾಟ್ ಕೊಹ್ಲಿ ಮಾತ್ರ ಮುಖ್ಯ ಕೋಚ್ ಬಳಿ ಸುಳಿಯಲಿಲ್ಲ.

ಮಧ್ಯಸ್ಥಿಕೆ ವಹಿಸಿದ ಬ್ಯಾಟಿಂಗ್ ಕೋಚ್!

ವಿರಾಟ್ ಕೊಹ್ಲಿ ಅವರು ಕೇವಲ ಸಹಾಯಕ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಅವರ ಮಾರ್ಗದರ್ಶನದಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ತಾಲೀಮು ನಡೆಸಿದರು. ವಿಶೇಷವೆಂದರೆ, ಗಂಭೀರ್ ಮತ್ತು ಕೊಹ್ಲಿ ನೇರವಾಗಿ ಮಾತನಾಡದೆ, ಕೊಟಕ್ ಅವರನ್ನೇ ತಮ್ಮ ಸಂದೇಶ ರವಾನಿಸುವ ಕೊಂಡಿಯಾಗಿ ಬಳಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಐಪಿಎಲ್ ಇತಿಹಾಸದಲ್ಲಿ ಇವರಿಬ್ಬರ ನಡುವೆ ನಡೆದಿದ್ದ ಹಳೆಯ ಮೈದಾನದ ಜಗಳಗಳು ಸದ್ಯದ ಈ ವಿಚಿತ್ರ ವರ್ತನೆಯಿಂದಾಗಿ ಮತ್ತೆ ಮುನ್ನೆಲೆಗೆ ಬಂದಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !