ರಾಜಸ್ಥಾನ ಸರಕಾರದಲ್ಲಿ ಬಿರುಕು: ಸಿಎಂ ಗೆಹ್ಲೋಟ್ ವಿರುದ್ಧ ಧ್ವನಿ ಎತ್ತಿದ ಸಚಿವನನ್ನು ಸದನದಿಂದ ಹೊರಹಾಕಿದ ಸ್ವೀಕರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನದ ಕಾಂಗ್ರೆಸ್ ಸರ್ಕಾರದಲ್ಲಿ ಬಿರುಕು ಮೂಡಿದ್ದು, ಸಿಎಂ ಹಾಗು ಸಚಿವನ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ರಾಜಸ್ಥಾನದಲ್ಲೂ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದರ ಬಗ್ಗೆ ಕಾಳಜಿವಹಿಸಬೇಕಿದೆ ಎಂಬ ಸಚಿವ ರಾಜೇಂದ್ರ ಸಿಂಗ್ ಗುಧಾ ಹೇಳಿಕೆ ನೀಡಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಿಂಗ್ ಗುಧಾರನ್ನು ಸಚಿವ ಸ್ಥಾನದಿಂದ ಅಮಾನತು ಗೊಳಿಸಿದ್ದರು.

ಇದೀಗ ಇಂದು ಅಮಾನತುಗೊಂಡ ಸಚಿವ ಕೆಂಪು ಡೈರಿ ಹಿಡಿದು ಕಲಾಪದಲ್ಲಿ ಪಾಲ್ಗೊಂಡಿದ್ದು, ರೆಡ್ ಡೈರಿ ಬಹಿರಂಗಪಡಿಸಲು ಅವಕಾಶ ನೀಡಬೇಕು ಎಂದು ಸ್ಪೀಕರ್ ಬಳಿ ತೆರಳಿದ್ದಾಳೆ. ಇತ್ತ ಸದನದಲ್ಲಿ ಗಲಾಟೆ ಜೋರಾಗಿದೆ. ಹೀಗಾಗಿ ಸ್ಪೀಕರ್ ಅಮಾನತು ಸಚಿವನನ್ನು ಮಾರ್ಶಲ್ ಕರೆಯಿಸಿ ಹೊರಹಾಕಲಾಗಿದೆ.

ಶೂನ್ಯವೇಳೆಯಲ್ಲಿ ರಾಜೇಂದ್ರ ಸಿಂಗ್ ಗುಧಾ, ಅಶೋಕ್ ಗೆಹ್ಲೋಟ್ ಕುರಿತ ಸ್ಫೋಟಕ ಮಾಹಿತಿಗಳ ರೆಡ್ ರೈಡ್ ಬಹಿರಂಗಪಡಿಸಲು ಅವಕಾಶ ಕೋರಿದ್ದಾರೆ. ಸ್ಪೀಕರ್ ಸಿಪಿ ಜೋಶಿ ಸ್ಥಾನದ ಬಳಿಕ ರೆಡ್ ರೈಡಿ ಹಿಡಿದು ತೆರಳಿದ ರಾಜೇಂದ್ರ ಸಿಂಗ್ ಗುಧಾ, ಈ ಡೈರಿಯಲ್ಲಿ ಐಟಿ ದಾಳಿಯ ರಹಸ್ಯ ಅಡಗಿದೆ. ಇದು ಬಯಲಾದರೆ ಅಶೋಕ್ ಗೆಹ್ಲೋಟ್ ನಿಜ ಬಣ ಬಯಲಾಗಲಿದೆ ಎಂದು ಹೇಳಿದ್ದಾರೆ.

ಗುಧಾಗೆ ಹೇಳಿಕೆಗೆ ಬಿಜೆಪಿ ಶಾಸಕರು ಸಾಥ್ ನೀಡಿದ್ದಾರೆ. ಸದನದ ಬಾವಿಯೊಳಗೆ ಭಾರಿ ಗದ್ದಲ ಏರ್ಪಟ್ಟಿತ್ತು. ಸರಕಾರದ ವಿರುದ್ಧವೇ ಸ್ವ ಪಕ್ಷದ ಸಚಿವರು ಹಾಗೂ ಶಾಸಕರು ಧ್ವನಿ ಎತ್ತಿದ್ದು, ಸಿಎಂ ಗೆಹ್ಲೋಟ್ ಗೆ ದೊಡ್ಡ ತಲೆನೋವು ತಂದಿಟ್ಟಿತು.

ಹೀಗಾಗಿ ಸ್ಪೀಕರ್ ರಾಜೇಂದ್ರ ಸಿಂಗ್ ಗುಧಾರನ್ನು ಸದನದಿಂದ ಹೊರಹಾಕಲು ಸೂಚಿಸಿದ್ದಾರೆ. ಮಾರ್ಶಲ್ ಕರೆಯಿಸಿ ಅಮಾನತು ಸಚಿವನನ್ನ ಹೊರಹಾಕಲಾಗಿದೆ.
ಆದರೆ ರಾಜಸ್ಥಾನದಲ್ಲಿ ಇದೀಗ ರೆಡ್ ರೈಡಿ ರಹಸ್ಯ ಕುತೂಹಲ ಹೆಚ್ಚಿಸಿದೆ. ಈ ಡೈರಿಯಲ್ಲಿ ಅಶೋಕ್ ಗೆಹ್ಲೋಟ್ ಹಾಗೂ ರಾಜಸ್ಥಾನ ಸರ್ಕಾರದ ಹಗರಣಗಳು ಬಯಲಿಗೆ ಬರುವ ಸಾಧ್ಯತೆ ಇದೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!