CINE| ಬಂದೇ ಬಿಡ್ತು ಕಾಂತಾರ ಪ್ರೀಕ್ವೆಲ್‌ನ ಝಲಕ್, ರೋಮಾಂಚನಗೊಳಿಸುವಂತಿದೆ ಫಸ್ಟ್‌ಲುಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕಳೆದ ವರ್ಷ ಪ್ರೇಕ್ಷಕರ ಮುಂದೆ ಬಂದು ನಿರೀಕ್ಷೆಗೂ ಮೀರಿದ ದೊಡ್ಡ ಹಿಟ್ ಆದ ಕನ್ನಡದ ಹೆಮ್ಮೆಯ ಚಿತ್ರ ‘ಕಾಂತಾರ’ದ ಪ್ರೀಕ್ವೆಲ್‌ನ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.

ಪಂಜುರ್ಲಿ ದೈವದ ಕಥೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ದೇಶನ ಮಾಡಲಾಗುತ್ತಿದೆ. ಇಂದು ಈ ಚಿತ್ರದ ಫಸ್ಟ್ ಲುಕ್ ಗ್ಲಿಂಪ್ಸ್  ಬಿಡುಗಡೆಯಾಗಿದ್ದು, ಈ ಪ್ರಿಕ್ವೆಲ್ ಮೊದಲ ಭಾಗಕ್ಕಿಂತ ಜನರ ಮನ ಕದಿಯುವುದರಲ್ಲಿ ಸಂದೇಹವೇ ಇಲ್ಲ ಅನಿಸುತ್ತಿದೆ. ಫಸ್ಟ್‌ಲುಕ್‌ ನೋಡುತ್ತಿದ್ದಂತೆ ಮೈ ರೋಮಾಂಚನಗೊಳ್ಳುತ್ತಿದ್ದು, ಕಾಂತಾರ-2 ಕೂಡ ಹಿಟ್‌ ಆಗುವುದರಲ್ಲಿ ಅನುಮಾನವೇ ಇಲ್ಲ ಎಂಬ ಭರವಸೆ ಹೊರಕುತ್ತಿದ್ದಾರೆ ಅಭಿಮಾನಿಗಳು.

ಸಪ್ತಮಿ ಗೌಡ ನಾಯಕಿಯಾಗಿ ನಟಿಸಿರುವ ರಿಷಬ್ ಶೆಟ್ಟಿ ಅವರ ಸ್ವಯಂ ನಿರ್ದೇಶನದ ಚಿತ್ರ ಕೇವಲ 25 ಕೋಟಿ ಬಜೆಟ್‌ನಲ್ಲಿ ಕಾಂತಾರ ತಯಾರಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.  ಈ ಚಿತ್ರವು ದೊಡ್ಡ ಬ್ಲಾಕ್ಬಸ್ಟರ್ ಆಗಿದ್ದರಿಂದ, ಈ ಬಾರಿಯೂ ಇದೇ ರೀತಿ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!