ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಷಭ್ ಪಂತ್ ಅಜೇಯ ಶತಕದ ಹೊರತಾಗಿಯೂ ಭಾರತ ತಂಡ 3ನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ನಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ 212 ರನ್ಗಳ ಸಾಧಾರಣ ಗುರಿ ನೀಡಿತು.
ಆಫ್ರಿಕಾ ಬೌಲಿಂಗ್ ದಾಳಿಗೆ ಭಾರತದ ಬ್ಯಾಟ್ಸಮನ್ ಗಳು ಆಡುವಲ್ಲಿ ವಿಫಲವಾಗಿದ್ದು, ಕೇವಲ . ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ 139 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳ ನೆರವಿನಿಂದ 100 ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು.
ನಾಯಕ ವಿರಾಟ್ ಕೊಹ್ಲಿ 29 ರನ್ಗಳಿಸಿದ್ದೇ ತಂಡದ 2ನೇ ಗರಿಷ್ಠ ಸ್ಕೋರ್ ಆಯಿತು. ಉಳಿದ ಬ್ಯಾಟರ್ 10ರ ಗಡಿದಾಟುವಲ್ಲಿ ವಿಫಲರಾದರು.
ದಕ್ಷಿಣ ಅಫ್ರಿಕಾ ಪರ ಮಾರ್ಕೊ ಜಾನ್ಸನ್ 36ಕ್ಕೆ 4, ಕಗಿಸೋ ರಬಾಡ 53ಕ್ಕೆ3, ಲಂಗಿ ಎಂಗಿಡಿ 21ಕ್ಕೆ 3 ವಿಕೆಟ್ ಪಡೆದರು.