ವಿಶೇಷ ದಾಖಲೆ ಬರೆದ ರಿಷಬ್ ಪಂತ್: ಈ ಸಾಧನೆ ಮಾಡಿದ ಮೊದಲ ಡೆಲ್ಲಿ ಆಟಗಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಹೊಸ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯ ಆಡಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಪಂತ್ ಈ ಸಾಧನೆ ಮಾಡಿದ್ದಾರೆ.

ಡೆಲ್ಲಿ ಫ್ರಾಂಚೈಸಿ ಪರ ಗರಿಷ್ಠ ಪಂದ್ಯ ಆಡಿದ ಹೆಗ್ಗಳಿಕೆಗೆ ಅಮಿತ್ ಮಿಶ್ರಾ ಪಾತ್ರರಾಗಿದ್ದಾರೆ. ಐಪಿಎಲ್ ಟೂರ್ನಿ ಹಾಗೂ ಚಾಂಪಿಯನ್ಸ್ ಲೀಗ್ ಸೇರಿದಂತೆ ಅಮಿತ್ ಮಿಶ್ರಾ 103 ಪಂದ್ಯಗಳನ್ನಾಡಿದ್ದಾರೆ. ಆದರೆ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ತಂಡವನ್ನು 100 ಬಾರಿ ಪ್ರತಿನಿಧಿಸಿದ ಹೆಗ್ಗಳಿಗೆ ರಿಷಬ್ ಪಂತ್ ಪಾಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ಮಾತ್ರ ಅಮಿತ್ ಮಿಶ್ರಾ, ಡೆಲ್ಲಿ ಕ್ಯಾಪಿಟಲ್ಸ್ ಪರ 99 ಪಂದ್ಯಗಳನ್ನಾಡಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಗರಿಷ್ಠ ಪಂದ್ಯ ಆಡಿದ ಕ್ರಿಕೆಟಿಗರು
ರಿಷಬ್ ಪಂತ್ : 100
ಅಮಿತ್ ಮಿಶ್ರಾ : 99
ಶ್ರೇಯಸ್ ಅಯ್ಯರ್ : 87
ಡೇವಿಡ್ ವಾರ್ನರ್ :83
ವಿರೇಂದ್ರ ಸೆಹ್ವಾಗ್ :79

2016ರಿಂದ ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ರಿಷಬ್ ಪಂತ್ 99 ಪಂದ್ಯಗಳಿಂದ 2856 ರನ್ ಸಿಡಿಸಿದ್ದಾರೆ. ಒಂದು ಸೆಂಚುರಿ ಸಾಧನೆಯನ್ನು ಮಾಡಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ 5ನೇ ಅತ್ಯುತ್ತಮ ವಿಕೆಟ್ ಕೀಪರ್ ಅನ್ನೋ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 62 ಕ್ಯಾಚ್, 19 ಸ್ಟಂಪಿಂಗ್ ಮೂಲಕ ಒಟ್ಟು 81 ಮಂದಿ ಬಲಿಪಡೆದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!