ತೆರಿಗೆ ಮರುಮೌಲ್ಯಮಾಪನ: ದೆಹಲಿ ಹೈಕೋರ್ಟ್‌ ನಲ್ಲಿ ಕಾಂಗ್ರೆಸ್ ಅರ್ಜಿ ವಜಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಯು(ಐ.ಟಿ) ಆರಂಭಿಸಿರುವ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಗುರುವಾರ ತಿರಸ್ಕರಿಸಿದೆ.

2017ರಿಂದ 2021ರ ಅವಧಿಯ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿ ಇದಾಗಿದೆ.

2014-15 ಮತ್ತು 2016-17ರ ಸಾಲಿನ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಯನ್ನು ಐ.ಟಿ. ಆರಂಭಿಸಿದ್ದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಕಾಂಗ್ರೆಸ್‌ ಈ ಹಿಂದೆ ಅ‌ರ್ಜಿ ಸಲ್ಲಿಸಿತ್ತು. ವಾರದ ಹಿಂದೆಯಷ್ಟೆ ಈ ಅರ್ಜಿಯನ್ನು ತಿರಸ್ಕರಿಸಿದ್ದ ಕೋರ್ಟ್‌, ಆದಾಯ ತೆರಿಗೆ ಇಲಾಖೆ ನಡೆಸುತ್ತಿರುವ ಈ ಪ್ರಕ್ರಿಯೆಯಲ್ಲಿ ಮೂಗುತೂರಿಸುವುದಿಲ್ಲ ಎಂದಿತ್ತು.

ಅದೇ ಮಾದರಿಯಲ್ಲಿ, 2017ರಿಂದ 21ರ ಅವಧಿಯ ಮರುಮೌಲ್ಯಮಾಪನದ ವಿಷಯದಲ್ಲೂ ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಯಶವಂತ್‌ ವರ್ಮ ಮತ್ತು ಪುರುಷೇಂದ್ರ ಕುಮಾರ್‌ ಕೌರವ್‌ ಅವರಿದ್ದ ನ್ಯಾಯಪೀಠ ಹೇಳಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!