ನೆಟ್‌ಫ್ಲಿಕ್ಸ್ ಜಾಹೀರಾತಿನಲ್ಲಿ ರಿಷಬ್ ಶೆಟ್ಟಿ, ಕಾಂತಾರ ಹಿಂದಿ ಒಟಿಟಿಯಲ್ಲಿ ರಿಲೀಸ್ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಹಿಂದಿ ನೆಟ್‌ಫ್ಲಿಕ್ಸ್‌ನಲ್ಲಿ ಯಾವಾಗ ಬರಲಿದೆ ಎನ್ನೋ ಪ್ರಶ್ನೆಗೆ ಕಡೆಗೂ ಉತ್ತರ ಸಿಕ್ಕಿದೆ.
ಇದಕ್ಕೆ ಖುದ್ದು ರಿಷಬ್ ಶೆಟ್ಟರೇ ಉತ್ತರ ನೀಡಿದ್ದು,ಇದೇ ಡಿಸೆಂಬರ್ 9 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಕಾಂತಾರ ಅಬ್ಬರಿಸಲಿದೆ ಎಂದು ಹೇಳಿದ್ದಾರೆ.

ನೆಟ್‌ಫ್ಲಿಕ್ಸ್‌ನ ಜಾಹೀರಾತಿನಲ್ಲಿ ರಿಷಬ್ ಕಾಣಿಸಿದ್ದು, ಕಾಂತಾರ ಹಿಂದಿ ಒಟಿಟಿಯಲ್ಲಿ ಯಾವಾಗ ರಿಲೀಸ್ ಎನ್ನುವ ಪ್ರಶ್ನೆಯನ್ನು ಸಾಕಷ್ಟು ಮಂದಿ ಅವರ ಮುಂದೆ ಇಡುತ್ತಾರೆ, ಮೊಬೈಲ್‌ನಲ್ಲಿ ರಿಲೀಸ್ ಡೇಟ್ ಪ್ರಶ್ನೆ ಕೇಳಿಸಿಕೊಂಡು ಸಾಕಾದ ಶೆಟ್ರು ಮೊಬೈಲ್ ಎತ್ತಿಟ್ಟು ರೂಂ ಸರ್ವೀಸ್ ಆರ್ಡರ್ ಮಾಡುತ್ತಾರೆ. ರೂಂ ಸರ್ವೀಸ್ ವ್ಯಕ್ತಿ ಬಂದು ನಿಂತು ಆರ್ಡರ್ ತಲುಪಿಸುತ್ತಾರೆ.

ಇನ್ನೇನು ಹೊರಡಬೇಕು ಎನ್ನುವಾಗ ಅವರೂ ಕಾಂತಾರ ಹಿಂದಿ ಒಟಿಟಿಯಲ್ಲಿ ಯಾವಾಗ ರಿಲೀಸ್ ಆಗಲಿದೆ ಎನ್ನುವ ಪ್ರಶ್ನೆಯಿಡುತ್ತಾರೆ. ಅದಕ್ಕೆ ರಿಷಬ್ ಇದೇ ಡಿಸೆಂಬರ್9 ರಿಂದ ಒಟಿಟಿಯಲ್ಲಿ ಕಾಂತಾರ ನಿಮ್ಮ ಮುಂದೆ ಬರಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!