Wednesday, November 30, 2022

Latest Posts

ಹೊಸ ಮೈಲಿಗಲ್ಲು ಸೃಷ್ಟಿಸೋ ಮತ್ತೊಂದು ಸಿನಿಮಾ ಮಾಡಲಿದ್ದಾರೆ ರಿಷಭ್ ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತರ ಮೂಲಕ ರಿಷಭ್ ಶೆಟ್ಟಿ ಮತ್ತೊಂದು ಹೆಜ್ಜೆ ಮೇಲೇರಿದ್ದಾರೆ. ಇನ್ನು ರಿಷಭ್ ಶೆಟ್ಟಿ ಮಾಡುವ ಸಿನಿಮಾಗಳ ಮೇಲೆ ಪ್ರೇಕ್ಷಕರ ನಿರೀಕ್ಷೆ ದುಪ್ಪಟ್ಟಾಗಿದೆ. ಹೀಗಿರುವಾಗ ಸಿನಿಮಾ ಕಥಾವಸ್ತು ಆಯ್ಕೆ ಬಗ್ಗೆ ರಿಷಭ್ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕಾಂತಾರ ರಿಲೀಸ್‌ಗೂ ಮುನ್ನ ರುದ್ರಪ್ರಯಾಗ್ ಎನ್ನುವ ಸಿನಿಮಾ ಮಾಡಬೇಕಿತ್ತು.

ಉತ್ತರ ಕರ್ನಾಟದ ಕಥಾವಸ್ತು ಇರುವ ರುದ್ರಪ್ರಯಾಗ್ ಸಿನಿಮಾದಲ್ಲಿ ಅನಂತನಾಗ್ ಅವರು ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆಯೇ ಸಿನಿಮಾ ಅನೌನ್ಸ್ ಮಾಡಿದ್ದ ರಿಷಭ್ ಲಾಕ್‌ಡೌನ್ ಹಾಗೂ ಕೊರೋನಾ ಕಾರಣದಿಂದ ಸುಮ್ಮನಾಗಿದ್ದರು. ಇದೀಗ ಈ ಸಿನಿಮಾ ಜೊತೆಗೆ ಇನ್ನೂ ಒಂದೆರೆಡು ಸಿನಿಮಾ ಬಗ್ಗೆ ರಿಷಭ್ ಆಲೋಚಿಸುತ್ತಿದ್ದಾರೆ. ರುದ್ರಪ್ರಯಾಗ್ ಕೂಡ ಕಾಂತಾರಾ ರೀತಿ ಹೊಸ ಮೈಲುಗಲ್ಲು ಸೃಷ್ಟಿ ಮಾಡುವ ನಿರೀಕ್ಷೆಯಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!