ಕಿಂಗ್ ಚಾರ್ಲ್ಸ್​ III ಭೇಟಿಯಾದ ರಿಷಿ ಸುನಕ್: ಬ್ರಿಟನ್ ನೂತನ ಪ್ರಧಾನಿಯಾಗಿ ಪದಗ್ರಹಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಿಷಿ ಸುನಕ್ ಅವರನ್ನು ಬ್ರಿಟನ್​ನ ನೂತನ ಪ್ರಧಾನಿಯನ್ನಾಗಿ ಕಿಂಗ್ ಚಾರ್ಲ್ಸ್​ III ಅಧಿಕೃತವಾಗಿ ಘೋಷಿಸಿದ್ದಾರೆ.

ಲಂಡನ್‌ನ ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ಇಂಗ್ಲೆಂಡ್ ರಾಜ ಮೂರನೇ ಚಾರ್ಲ್ಸ್ ಭೇಟಿಯಾದ ಬೆನ್ನಲ್ಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಿಷಿ ಸುನಕ್ ಪ್ರಧಾನಿಯಾಗಿ ಪದಗ್ರಹಣ ಮಾಡಲು ಇಂಗ್ಲೆಂಡ್ ರಾಜ ಚಾರ್ಲ್ಸ್ ಭೇಟಿಯಾಗಿ ಅನುಮತಿ ಕೋರಿದರು. ಬಕಿಂಗ್‌ಹ್ಯಾಮ್ ಪ್ಯಾಲೇಸ್‌ನಲ್ಲಿ ರಾಜ ಚಾರ್ಲ್ಸ್ ಭೇಟಿಯಾದ ಸುನಕ್ ಮಹತ್ವದ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾತನಾಡಿದ ಅವರು, ಈ ಕ್ಷಣದಿಂದಲೇ ನನ್ನ ಅಧಿಕಾರವದಿ ಆರಂಭಗೊಂಡಿದೆ. ಬ್ರಿಟನ್ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಸೂಕ್ತ ಪರಿಹಾರ ಒದಿಗಿಸುತ್ತೇನೆ ಎಂದು ಹೇಳಿದ್ದಾರೆ.
ಬ್ರಿಟನ್ ನಲ್ಲಿ ಅಸ್ಥಿರತೆ ದೂರ ಮಾಡಿ ಸ್ಥಿರತ ತರುತ್ತೇನೆ. ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳು ಜಾರಿಯಾಗಲಿದೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸುತ್ತೇನೆ. ದೇಶ ಹಾಗೂ ಪಕ್ಷಕ್ಕಾಗಿ ಸೇವೆ ಸಲ್ಲಿಸುತ್ತೇನೆ. ಬ್ರಿಟನ್ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಮತ್ತೆ ಗತವೈಭವನ್ನು ಮರುಕಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ದೇಶಕ್ಕಾಗಿ ಹಗಲು ರಾತ್ರಿ ದುಡಿಯುತ್ತೇನೆ. ಕೇವಲ ಮಾತಿನಲ್ಲಿ ಮಾತ್ರವಲ್ಲ, ಕೆಲಸ ಮಾಡಿ ತೋರಿಸುತ್ತೇನೆ. ಬ್ರಿಟನ್ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ.

ಬ್ರಿಟನ್ನಿನ ಜನರಿಗಾಗಿ ನಾನು ಹಗಲು-ರಾತ್ರಿ ಸಮಗ್ರತೆ ಹಾಗೂ ವಿನಮ್ರತೆಯಿಂದ ಸೇವೆ ಸಲ್ಲಿಸಲು ಪಣ ತೊಡುತ್ತೇನೆ’ ಎಂದು ಘೋಷಿಸಿದ್ದಾರೆ. ‘ಬ್ರಿಟನ್‌ ಒಂದು ಅತ್ಯುತ್ತಮ ದೇಶವಾಗಿದೆ. ಆದರೆ ನಾವು ಗಂಭೀರವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಮಗೀಗ ಸ್ಥಿರತೆ ಹಾಗೂ ಏಕತೆಯ ಅಗತ್ಯವಿದೆ. ಹೀಗಾಗಿ ಇದನ್ನೇ ನಾನು ನನ್ನ ಆದ್ಯತೆಯನ್ನಾಗಿಸಿ ಪಕ್ಷವನ್ನು ಹಾಗೂ ದೇಶವನ್ನು ಒಗ್ಗೂಡಿಸಲು ಪ್ರಯತ್ನಿಸುತ್ತೇನೆ. ದೇಶ ಎದುರಿಸುತ್ತಿದ್ದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಹಾಗೂ ನಮ್ಮ ಮುಂದಿನ ಪೀಳಿಗೆಯ ಸಮೃದ್ಧ ಭವಿಷ್ಯಕ್ಕಾಗಿ ಇದು ಅನಿವಾರ್ಯವಾಗಿದೆ’ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!