ಬ್ರಿಟನ್‌ ಪ್ರಧಾನಿ ಚುನಾವಣೆ: ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ ರಿಷಿ ಸುನಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬ್ರಿಟನ್ ಪ್ರಧಾನಿ ಅಭ್ಯರ್ಥಿ ಹುದ್ದೆಯ ಚುನಾವಣೆಯಲ್ಲಿ ಭಾರತೀಯ ಮೂಲದ ರಿಷಿ ಸುನಕ್ ಅವರು ಮೊದಲ ಸುತ್ತಿನ ಮತದಾನದಲ್ಲಿ ಭಾರೀ ಮುನ್ನಡೆ ಸಾಧಿಸಿದ್ದಾರೆ.
ಆಡಳಿತರೂಢ ಕನ್ಸರ್ವೇಟೀವ್ ಪಕ್ಷದ ಸಂಸದರಲ್ಲಿ ಅತಿಹೆಚ್ಚು ಮತ ಪಡೆದವರು ಬ್ರಿಟನ್‌ ಪ್ರಧಾನಿ ಹುದ್ದೆಗೆ ಏರಲಿದ್ದಾರೆ. ಈ ನಿಟ್ಟಿನಲ್ಲಿ ನಡೆದ ಮೊದಲ ಸುತ್ತಿನ ಮತದಾನದಲ್ಲಿ ರಿಷಿ ಸುನಕ್ ಪರವಾಗಿ 88 ಮತಗಳು ಚಲಾವಣೆಯಾಗಿವೆ. ಈ ವೇಳೆ ಇಬ್ಬರು ಅಭ್ಯರ್ಥಿಗಳು ಪ್ರಧಾನಿ ಹುದ್ದೆಯ ರೇಸ್‌ ನಿಂದ ಹೊರಬಿದ್ದಿದ್ದಾರೆ.
ಸಂಸದೆ ಪೆನ್ನಿ ಮೋರ್ಡಾಂಟ್ (67 ಮತಗಳು) ಲಿಜ್ ಟ್ರಸ್ (50 ಮತಗಳು) ಕೆಮಿ ಬಡೆನೊಚ್ (40 ಮತಗಳು) ಹಾಗೂ ಟಾಮ್ ಟುಂಗೇಧತ್ (37 ಮತಗಳು) ಮರ್ತೋರ್ವ ಭಾರತೀಯ ಸಂಜಾತೆ ಸುಯೆಲ್ಲಾ ಬ್ರಾವೆರ್ಮನ್‌ (32)  ಪ್ರಧಾನಿ ರೇಸ್‌ ನಲ್ಲಿ ಉಳಿದ ಅಭ್ಯರ್ಥಿಗಳಾಗಿದ್ದಾರೆ.
ಮಾಜಿ ಸಚಿವರಾದ ನದೀಮ್ ಜಹಾವಿ ಹಾಗೂ ಜೆರೆಮಿ ಹಂಟ್ ಪ್ರಧಾನಿ ರೇಸ್‌ ನಲ್ಲಿ ಉಳಿಯಲು ಕನಿಷ್ಠ ಅರ್ಹತೆಯಾದ 30 ಸಂಸದರ ಬೆಂಬಲವನ್ನು ಪಡೆಯುವಲ್ಲಿ ವಿಫಲರಾಗಿದ್ದು ರೇಸ್ ನಿಂದ ಹೊರಬಿದ್ದಿದ್ದಾರೆ.
ಅಭ್ಯರ್ಥಿಗಳ ಪೈಕಿ ರಿಷಿ ಸುನಕ್ ಭಾರೀ ಮುನ್ನಡೆ ಸಾಧಿಸಿದ್ದು, ಮೊದಲ ಹಂತದ ಮತದಾನದ ಬಳಿಕ ಪ್ರಧಾನಿ ಹುದ್ದೆಗೆ ಏರಬಲ್ಲ ನೆಚ್ಚಿನ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಾರ, ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ ಕನ್ಸರ್ವೇಟಿವ್ ನಾಯಕನನ್ನು ಸೆ. 5ರಂದು ಘೋಷಿಸಬೇಕಿದೆ. ಸ್ಪರ್ಧೆಯಲ್ಲಿರುವವರು ಗುರುವಾರ ಮತ್ತೊಂದು ಸುತ್ತಿನ ಮತದಾನವನ್ನು ಎದುರಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!