1,800 ಉದ್ಯೋಗಿಗಳನ್ನು ತೆಗೆದು ಹಾಕಿದ ಮೈಕ್ರೋಸಾಫ್ಟ್:‌ ಈ ಕುರಿತು ಕಂಪನಿ ಹೇಳಿದ್ದೇನು ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತನ್ನ ರಚನಾತ್ಮಕ ಹೊಂದಾಣಿಕೆಯ ಭಾಗವಾಗಿ ಸಾಫ್ಟ್‌ ವೇರ್‌ ದಿಗ್ಗಜ ಮೈಕ್ರೋಸಾಫ್ಟ್‌ ಕಂಪೆನಿಯು ತನ್ನ 1,800 ಉದ್ಯೋಗಿಗಳನ್ನು ವಜಾಗೊಳಿಸಿದೆ. ಜೂ.30ರಂದು ತನ್ನ ಹಣಕಾಸಿನ ವರ್ಷವನ್ನು ಪೂರ್ಣಗೊಳಿಸಿದ ಕಂಪೆನಿಯು ಕೆಲ ಗುಂಪುಗಳು ಮತ್ತು ಜವಾಬ್ದಾರಿಗಳನ್ನು ಮರುಹೊಂದಾಣಿಕೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆಲ ಉದ್ಯೋಗಗಳನ್ನು ಕಡಿತಗೊಳಿಸಿದೆ ಎಂದು ಕಂಪನಿಯು ಹೇಳಿದೆ.

ಪ್ರಪಂಚದಾದ್ಯಂತ ವಿವಿಧ ಪ್ರದೇಶದಲ್ಲಿರುವ ಸಲಹಾ, ಗ್ರಾಹಕ ಮತ್ತು ಪಾಲುದಾರ ಪರಿಹಾರ ಗುಂಪುಗಳಲ್ಲಿನ ಉದ್ಯೋಗಿಗಳನ್ನು ಕಡಿತಗೊಳಿಸಲಾಗಿದೆ. ಆದರೆ ಕಂಪನಿಯು ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಮುಂದುವರೆಸುತ್ತದೆ, ಉದ್ಯೋಗಿಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸಕೊಂಡು ಪ್ರಸಕ್ತ ಹಣಕಾಸು ವರ್ಷವನ್ನು ಪೂರ್ಣಗೊಳಿಸುತ್ತದೆ ಎಂದು ಕಂಪನಿ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

“ಎಲ್ಲಾ ಕಂಪನಿಗಳಂತೆ, ನಾವು ನಿಯಮಿತವಾಗಿ ನಮ್ಮ ವ್ಯಾಪಾರದ ಆದ್ಯತೆಗಳನ್ನು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅದಕ್ಕೆ ಅನುಗುಣವಾಗಿ ರಚನಾತ್ಮಕ ಹೊಂದಾಣಿಕೆಗಳನ್ನು ಮಾಡುತ್ತೇವೆ. ನಮ್ಮ ಉದ್ಯೋಗಿಗಳ ಒಟ್ಟೂ ಸಂಖ್ಯೆಗೆ ಹೋಲಿಸಿದರೆ ಕಡಿಮೆ ಎಲಿಮಿನೇಷನ್‌ ನಡೆದಿದೆ” ಎಂದು ಮೈಕ್ರೋಸಾಫ್ಟ್‌ ಹೇಳಿದೆ.

ಮತ್ತೊಂದು ದೊಡ್ಡ ಟೆಕ್ ದೈತ್ಯ, ಗೂಗಲ್, 2022 ರ ಉಳಿದ ಅವಧಿಗೆ ನೇಮಕಾತಿಯನ್ನು ನಿಧಾನಗೊಳಿಸುವುದಾಗಿ ಹೇಳಿದ್ದು ಗೂಗಲ್‌ ಸಿಇಒ ಸುಂದರ್‌ ಪಿಚ್ಚೈ ಈ ಕುರಿತು ಈ ಮೇಲ್‌ ನಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!