Wednesday, September 28, 2022

Latest Posts

ಇದು ಸಿನಿಮಾ ಅಲ್ಲ….ನಿಜವಾದ ಅಪಘಾತ: ಐದು ಬಾರಿ ಕಾರು ಪಲ್ಟಿಯಾದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯಪ್ರದೇಶದ ಚಿಂದ್ವಾರ-ನಾಗ್ಪುರ ಹೆದ್ದಾರಿಯಲ್ಲಿ ವೇಗವಾಗಿ ಬಂದ ಕಾರೊಂದು ಏಕಾಏಕಿ ನಿಯಂತ್ರಣ ತಪ್ಪಿ ಪಕ್ಕದ ಹೊಲಗಳಿಗೆ ನುಗ್ಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋ ನೋಡಿದರೆ ಥೇಟ್ ಸಿನಿಮಾಗಳಲ್ಲಿನ ಅಪಘಾತದ ದೃಶ್ಯವೇ ನೆನಪಾಗುತ್ತದೆ.

ಚಿಂದ್ವಾರ-ನಾಗ್ಪುರ ಹೆದ್ದಾರಿಯ ಲಿಂಗಾ ಬಳಿ ವೇಗವಾಗಿ ಬಂದ ಕಾರೊಂದು ಹಠಾತ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರು ಅತಿವೇಗದ ವೇಗ ಹಾಗೂ ಭಾರೀ ಮಳೆಗೆ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವೀಡಿಯೋದಲ್ಲಿ ಕಾರು  ಕಾರು ಪಲ್ಟಿಯಾಗುತ್ತಿರುವುದನ್ನು ಗಮನಿಸಿದ ಹಸು ಪಕ್ಕಕ್ಕೆ ಹೋಗಿ ತನ್ನ ಪ್ರಾಣ ಉಳಿಸಿಕೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಈ ರಸ್ತೆ ಅಪಘಾತದ ವಿಡಿಯೋವನ್ನು ಸಂಸದ ನಕುಲ್ ನಾಥ್ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮಳೆಗಾಲದಲ್ಲಿ ಕಡಿಮೆ ವೇಗದಲ್ಲಿ ವಾಹನ ಚಲಾಯಿಸುವಂತೆ ಸಂಸದರು ವಾಹನ ಸವಾರರಲ್ಲಿ ಮನವಿ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!