Monday, October 3, 2022

Latest Posts

ಬ್ರಿಟನ್‌ ರಾಜಕುಮಾರಿ ಡಯಾನಾ ಬಳಸಿದ್ದ ಕಾರು ಬರೋಬ್ಬರಿ 6.11 ಕೋಟಿಗೆ ಹರಾಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬ್ರಿಟನ್ ರಾಜಕುಮಾರಿ ಡಯಾನಾ ಅವರು 1980 ರ ದಶಕದಲ್ಲಿ ಬಳಸುತ್ತಿದ್ದ ಕಾರನ್ನು 6.11 ಕೋಟಿ ( 650,000 ಪೌಂಡ್‌)ಗೆ ಮಾರಾಟ ಮಾಡಲಾಗಿದೆ. ಡಯಾನಾ ಅವರು 25 ನೇ ಪುಣ್ಯತಿಥಿಗೆ ಕೆಲವೇ ದಿನಗಳಿರುವಾಗ ಈ ಹರಾಜು ಪ್ರಕ್ರಿಯೆ ನಡೆದಿದೆ.
ಕಪ್ಪು ವರ್ಣದ ಫೋರ್ಡ್ ಎಸ್ಕಾರ್ಟ್ ಆರ್‌ಎಸ್ ಟುರೊಬ್‌ ಕಾರು ಕೊಳ್ಳಲು ಹರಾಜುದಾರರ ನಡುವೆ ಬಾರೀ ಪೈಪೋಟಿ ಏರ್ಪಟ್ಟಿತ್ತು ಎಂದು ಹರಾಜು ಸಂಸ್ಥೆ ಸಿಲ್ವರ್‌ಸ್ಟೋನ್ ಹೇಳಿದೆ.
ಬ್ರಿಟನ್‌ ನ ಮೂಲದ ವ್ಯಕ್ತಿಯೊಬ್ಬರು ಈ ಕಾರನ್ನು ಖರೀದಿಸಿದ್ದಾರೆ. ಅವರ ಹೆಸರನ್ನು ಬಹಿರಂಗಪಡಿಸಲಾಗಿಲಾಗುವುದಿಲ್ಲ ಎಂದು ಹರಾಜು ಸಂಸ್ಥೆ ತಿಳಿಸಿದೆ.
ವಿಶ್ವಾದ್ಯಂತ ಅಭಿಮಾನಿಗಳು ಡಯಾನಾ ಸಾವಿನಿಂದ ಕಾಲು ಶತಮಾನವನ್ನು ಆಚರಿಸಲು ತಯಾರಿ ನಡೆಸುತ್ತಿದ್ದಾರೆ. ಆಗಸ್ಟ್ 31, 1997 ರಂದು ಪ್ಯಾರಿಸ್‌ನಲ್ಲಿ ಅತಿವೇಗದ ಕಾರು ಅಪಘಾತದಲ್ಲಿ ಡಯಾನಾ ಮರಣ ಹೊಂದಿದ್ದರು. ಡಯಾನಾ 1985 ರಿಂದ 1988 ರವರೆಗೆ ಈ ಎಸ್ಕಾರ್ಟ್ ಕಾರನ್ನು ಓಡಿಸಿದಳು. ಆರ್‌ಎಸ್ ಟರ್ಬೊ ಸರಣಿ 1 ಅನ್ನು ಬಿಳಿ ಬಣ್ಣದಲ್ಲಿ ಪಡೆದುಕೊಂಡಿದ್ದರು. ಆದರೆ ಡಯಾನಾ ಅದನ್ನು ಕಪ್ಪು ಬಣ್ಣದಲ್ಲಿ ಪಡೆದುಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!