ಹೊಸದಿಗಂತ ವರದಿ, ಕಲಬುರಗಿ:
ಟಂಟಂ – ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಮಿರಿಯಾಣ ಬಳಿ ನಡೆದಿದೆ.
ಸರ್ಫರಾಜ್ ಸೈಯದ್ (25) ಮೃತ ಬೈಕ್ ಸವಾರ.
ಚೆಟ್ಟಿನಾಡ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಸೈಯದ್, ಕೆಲಸ ಮುಗಿಸಿಕೊಂಡು ತಾಂಡೂರಿಗೆ ಹೋಗುವಾಗ ಈ ಅವಘದ ಸಂಭವಿಸಿದೆ.
ಟಂಟಂ ರಭಸವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.ಮಿರಿಯಾಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.