September 22, 2026
Tuesday, September 22, 2026
spot_img

ರಸ್ತೆ ಅಪಘಾತ: ಬೈಕ್‌ನಲ್ಲಿ ತೆರಳುತ್ತಿದ್ದ ಸಿಐಎಸ್‌ಎಫ್ ಯೋಧನನ್ನು ಬ*ಲಿ ಪಡೆದ ಲಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಲಿಟರಿ ಕ್ವಾಟ್ರಸ್‌ಗೆ ವಿದ್ಯುತ್ ಸಾಮಗ್ರಿ ತರಲು ಬೈಕ್‌ನಲ್ಲಿ ತೆರಳುತ್ತಿದ್ದ ಸಿಐಎಸ್‌ಎಫ್ ಯೋಧ ಲಾರಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ದಾಬಸ್‌ಪೇಟೆ ಸಮೀಪದ ಲಕ್ಕೂರು ಬಳಿ ನಡೆದಿದೆ.

ಮೃತರನ್ನು ಪಂಜಾಬ್ ಮೂಲದ ಪ್ರಿನ್ಸಿಪಲ್ ಸಿಂಗ್ (35) ಎಂದು ಗುರುತಿಸಲಾಗಿದೆ.

ದಾಬಸ್‌ಪೇಟೆಯ ಸಿಐಎಸ್‌ಎಫ್ ಕ್ವಾಟ್ರಸ್‌ನಲ್ಲಿ ವಾಸವಿದ್ದ ಅವರು ಕಾನ್‌ಸ್ಟೇಬಲ್‌ ರ‍್ಯಾಂಕ್‌ನ ಯೋಧರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಾಮಗ್ರಿ ತರಲು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಿಂಗ್ ಲಾರಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ನೆಲಮಂಗಲ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !